Thursday, August 13, 2026

BDA Apartments

Home Cinema ಅಭಿಷೇಕ್’ಗೆ ಶುಭ ಹಾರೈಸಿದ ಕಿಚ್ಚ ಸುದೀಪ್

ಅಭಿಷೇಕ್’ಗೆ ಶುಭ ಹಾರೈಸಿದ ಕಿಚ್ಚ ಸುದೀಪ್

ಬೆಂಗಳೂರು, ಜೂನ್ 01, 2019 (www.justkannada.in): ನಟ ಕಿಚ್ಚ ಸುದೀಪ್‌ ಟ್ವಿಟರ್ ನಲ್ಲಿ ಅಭಿಷೇಕ್ ಅಂಬರೀಶ್ ಗೆ ಶುಭಹಾರೈಸಿದ್ದಾರೆ.

ಅಭಿಷೇಕ್ ಗೆ ಅಭಿನಂದನೆಗಳು ಮೊದಲ ಸಿನಿಮಾಗೆ ಯಶಸ್ಸು ಸಿಗಲಿ, ಅಭಿ ಎರಡೆರಡು ಒತ್ತಡಗಳನ್ನು ಹೇಗೆ ನಿಭಾಯಿಸಿದ್ರಿ ಅಂತ ಹೇಳಿರೋ ಕಿಚ್ಚ ಸುದೀಪ್ ಅಮರ್ ಸಿನಿಮಾಗೆ ಒಳ್ಳೆಯದಾಗಲಿ, ಕನ್ನಡ ಚಿತ್ರರಂಗದ ಪರವಾಗಿ ಸ್ಯಾಂಡಲ್‍ವುಡ್ ಗೆ ಸ್ವಾಗತಿಸುತ್ತೇನೆ ಎಂದಿದ್ದಾರೆ.

ಸಿನಿಮಾವನ್ನು ಎಂಜಾಯ್ ಮಾಡಿಕೊಂಡು ಮಾಡಿ. ಚಿತ್ರರಂಗಕ್ಕೆ ಬಂದಿದ್ದೀರಿ ಬನ್ನಿ ಒಟ್ಟಿಗೆ ಕೆಲಸ ಮಾಡೋಣ, ಒಟ್ಟಿಗೆ ಸೇರೋಣ, ಒಟ್ಟಿಗೆ ನಡೆಯೋಣ, ಆಲ್ ದಿ ಬೆಸ್ಟ್, ನಿಮ್ಮ ಸಿನಿಮಾ ನೋಡೋಕೆ ಹೆಮ್ಮೆ ಆಗುತ್ತೆ ಅಂತ ಹೇಳಿದ್ದಾರೆ.