Friday, August 14, 2026

BDA Apartments

Home Front Page ಯಡಿಯೂರು ಸಿದ್ದಲಿಂಗೇಶ್ವರನಿಗೆ ‘ಗ್ರಹಣ ಪೂಜೆ’ ಸಲ್ಲಿಸಿದ ಸಿಎಂ ಕುಟುಂಬ

ಯಡಿಯೂರು ಸಿದ್ದಲಿಂಗೇಶ್ವರನಿಗೆ ‘ಗ್ರಹಣ ಪೂಜೆ’ ಸಲ್ಲಿಸಿದ ಸಿಎಂ ಕುಟುಂಬ

ಮಂಡ್ಯ, ಜೂನ್ 21, 2020 (www.justkannada.in): ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬ ಮನೆದೇವರಾದ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಿನ್ನೆಯೇ ಯಡಿಯೂರಿಗೆ ಭೇಟಿ ನೀಡಿ ದೇವಸ್ಥಾನದಲ್ಲಿ ತಂಗಿದ್ದ ಕುಟುಂಬ ಸದಸ್ಯರು ಹಲವು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ವೃಶ್ಚಿಕ ರಾಶಿಗೆ ಅಶುಭ ಫಲವೆಂದು ಶಾಂತಿಗಾಗಿ ಜೋತಿಷ್ಯರ ಸಲಹೆಯಂತೆ ಸಿಎಂ ಕಿರಿಯ ಪುತ್ರ ವಿಜಯೇಂದ್ರ ದಂಪತಿ ಹೋಮ ಹನವನದಂತಹ ವಿಶೇಷ ಪೂಜೆಗಳನ್ನು ನಡೆಸಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಬೆಂಗಳೂರಿನಲ್ಲೇ ಇದ್ದು, ಪುತ್ರಿಯರು, ಸಂಬಂಧಿಕರು ಮಾತ್ರ ವಿಜಯೇಂದ್ರ ಜೊತೆಗೆ ಆಗಮಿಸಿದ್ದರು.