ಭಾರತ-ಚೀನಾ ಸಂಘರ್ಷ: ಮೂರು ಸೇನೆಗಳಿಗೆ ಹೈ ಅಲರ್ಟ್ ಆಗಿರುವಂತೆ ಸೂಚನೆ…

ನವದೆಹಲಿ,ಜೂ,17,2020(www.justkannada.in):  ಲಡಾಖ್ ನಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷವೇರ್ಪಟ್ಟಿದ್ದು ನಿನ್ನೆ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಹೀಗಾಗಿ ಎರಡು ದೇಶಗಳ ನಡುವೆ ಸಂಘರ್ಷ ತಾರಕಕ್ಕೇರಿದ್ದು ಮೂರು ಸೇನಾಪಡೆಗಳಿಗೂ ಆಲರ್ಟ್ ಆಗಿರುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಲಾಗಿದೆ.

ಚೀನಾದ ವಿರುದ್ದ ಪ್ರತಿದಾಳಿಗೆ ಸಜ್ಜಾಗಿರಿ. ದಾಳಿಗೆ ಪ್ರತ್ತ್ಯುತ್ತರ ನೀಡಲು ಮೇಲಾಧಿಕಾರಿಗಳು ಮತ್ತು ಸರ್ಕಾರದ ಆದೇಶ ಕಾಯುವ ಅಗತ್ಯವಿಲ್ಲ. ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರಿ ಎಂದು ಭಾರತೀಯ ಸೇನೆಗೆ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ.indo-china-conflict-instructed-high-alert-three-armies

ಈ ಮೂಲಕ ಸರ್ಕಾರದಿಂದ ಭಾರತೀಯ ಸೇನೆಗೆ ತುರ್ತು ಅಧಿಕಾರ ನೀಡಲಾಗಿದ್ದು ಚೀನಾ ದಾಳಿಗೆ ಪ್ರತ್ತ್ಯುತ್ತರ ನೀಡಲು ಸಜ್ಜಾಗಿರುವಂತೆ ಸೂಚಿಸಿದೆ. ಹಾಗೆಯೇ ಗಡಿಯಲ್ಲಿ ಮೂರು ಸೇನಾಪಡೆ ಹೈಅಲರ್ಟ್ ಆಗಿರುವಂತೆ ತಿಳಿಸಿದೆ.

Key words: Indo-China- conflict-Instructed – High Alert – Three Armies.