Saturday, August 29, 2026

BDA Apartments

Home Front Page ವಿಧಾನ ಪರಿಷತ್ ಗೆ ಈ ಮೂವರ ಹೆಸರು ಶಿಫಾರಸ್ಸು- ಸಚಿವ ಎಸ್.ಟಿ ಸೋಮಶೇಖರ್ ಹೇಳಿಕೆ…

ವಿಧಾನ ಪರಿಷತ್ ಗೆ ಈ ಮೂವರ ಹೆಸರು ಶಿಫಾರಸ್ಸು- ಸಚಿವ ಎಸ್.ಟಿ ಸೋಮಶೇಖರ್ ಹೇಳಿಕೆ…

ಮೈಸೂರು,ಜೂ,16,2020(www.justkannada.in): ವಿಧಾನ ಪರಿಷತ್‌ಗೆ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಶಂಕರ್‌ ಹೆಸರನ್ನ ಶಿಫಾರಸ್ಸು ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್ , ಬಿಜೆಪಿ ಕೋರ್ ಕಮಿಟಿಯಲ್ಲಿ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಶಂಕರ್‌  ಈ ಮೂವರ ಹೆಸರು ಅಂತಿಮವಾಗಿದೆ. ಕೋರ್ ಕಮಿಟಿ ತನ್ನ ಪಟ್ಟಿಯನ್ನ ಹೈಕಮಾಂಡ್ ಗೆ ಕಳುಹಿಸಿದೆ. ಸಂಜೆ ವೇಳೆಗೆ ಅಧಿಕೃತ ಆದೇಶ ಬರಲಿದೆ ಎಂದು ಮಾಹಿತಿ ನೀಡಿದರು.

ಮೂವರು ಒಂದೇ ಕೋಮಿನವರು ಎಂಬ ಪ್ರಶ್ನೆಗಳು ಈಗ ಇಲ್ಲ. ಈ‌ ಮೂವರು ರಾಜೀನಾಮೆ ಕೊಟ್ಟಿರುವುದಕ್ಕೆ ಸರ್ಕಾರ ಬಂದಿರುವುದು. ಸಿಎಂ ಕೊಟ್ಟ ಭರವಸೆಯೇನು ಎಂಬುದು ನಮಗೂ ಗೊತ್ತು ಅವರಿಗೂ ಗೊತ್ತು.? ಅಶ್ವತ್ ನಾರಾಯಣ್ ಕೋರ್ ಕಮಿಟಿಯಲ್ಲಿ ಇಲ್ಲ. ಅಲ್ಲಿ ಏನ್ ತೀರ್ಮಾನ ಆಗಬೇಕೋ ಅದೆಲ್ಲ ಆಗಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

Key words: three-recommended –Legislative council-Minister-ST Somashekhar.