ಅರ್ಧಕ್ಕೆ ಸ್ಥಗಿತಗೊಂಡಿದ್ದ ಚಲನಚಿತ್ರ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ !

ಬೆಂಗಳೂರು, ಜೂನ್ 16, 2020 (www.justkannada.in): ಸ್ಥಗಿತಗೊಂಡಿರುವ ಚಲನಚಿತ್ರ ಚಿತ್ರೀಕರಣ ಪೂರ್ಣಗೊಳಿಸಲು ಸರ್ಕಾರ ಅನುಮತಿ ನೀಡಿದೆ.

ಲಾಕ್ಡೌನ್ ಕಾರಣ ಶೂಟಿಂಗ್ ಅರ್ಧಕ್ಕೆ ನಿಂತಿದ್ದರೆ ಮುಂದುವರಿಕೆ ಮಾಡಬಹುದಾಗಿದೆ. ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಗೆ ಸರ್ಕಾರದಿಂದ ಅನುಮತಿ ದೊರೆತಿದೆ. ಆದರೆ ಹೊಸ ಚಲನಚಿತ್ರ/ಧಾರಾವಾಹಿ ಚಿತ್ರೀಕರಣಕ್ಕೆ ಅವಕಾಶ ಇರುವುದಿಲ್ಲ ಎನ್ನಲಾಗಿದೆ.

ಕೇಂದ್ರ ಗೃಹ ಮಂತ್ರಾಲಯದ ಆದೇಶದಂತೆ ಕಂಟೇನ್ಮೆಂಟ್ ವಲಯದಲ್ಲಿ ಲಾಕ್ಡೌನ್ ಜೂನ್ 30ರವರೆಗೆ ವಿಸ್ತರಣೆಯಾಗಿದೆ. ಕಂಟೇನ್ಮೆಂಟ್ ಹೊರತುಪಡಿಸಿದ ಪ್ರದೇಶದಲ್ಲಿ ಹಂತಹಂತವಾಗಿ ನಿಷೇಧಿತ ಚಟುವಟಿಕೆಗಳನ್ನು ತೆರೆಯಲು ಲಾಕ್ಡೌನ್ ಸಡಿಲಿಕೆ ಬಗ್ಗೆ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ.

ಇದರ ಪರಿಣಾಮ ಜೂನ್ 30ರವರೆಗೆ ಕಂಟೇನ್ಮೆಂಟ್ ವಲಯದಲ್ಲಿ ಲಾಕ್ಡೌನ್ ಮುಂದುವರೆದಿದ್ದರೂ, ಚಲನಚಿತ್ರ ಮತ್ತು ಟಿವಿ ಚಿತ್ರೀಕರಣ ನಿರ್ಮಾಣ ಸಂಬಂಧಿತ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ.