Thursday, August 13, 2026

BDA Apartments

Home Front Page ಕೊರೊನಾ ಕಾಟ: ಲಂಕಾ ಪ್ರವಾಸ ರದ್ದು ಮಾಡಿದ ಟೀಂ ಇಂಡಿಯಾ

ಕೊರೊನಾ ಕಾಟ: ಲಂಕಾ ಪ್ರವಾಸ ರದ್ದು ಮಾಡಿದ ಟೀಂ ಇಂಡಿಯಾ

ಮುಂಬೈ, ಜೂನ್ 12, 2020 (www.justkannada.in): ಕೊರೊನಾ ವೈರಸ್ ಕಾರಣದಿಂದಾಗಿ ಟೀಂ ಇಂಡಿಯಾ ಶ್ರೀಲಂಕಾಕ್ಕೆ ಪ್ರವಾಸ ಮುಂದೂಡಲ್ಪಟ್ಟಿದೆ.

ವಿರಾಟ್ ಕೊಹ್ಲಿ ಪಡೆ ಶ್ರೀಲಂಕಾದಲ್ಲಿ ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಏಕದಿನ ಮತ್ತು ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಬೇಕಿತ್ತು.

ಜೂನ್ ತಿಂಗಳಾಂತ್ಯಕ್ಕೆ ಏಕದಿನ ಪಂದ್ಯಗಳ ಸರಣಿ ಮತ್ತು ಜುಲೈ ಆರಂಭಕ್ಕೆ ಟಿ20 ಪಂದ್ಯಗಳ ಸರಣಿ ಆರಂಭವಾಗಬೇಕಿತ್ತು. ಪಂದ್ಯಗಳಿಗೆ ದಿನಾಂಕ ಇನ್ನೂ ಅಂತಿಮಗೊಂಡಿರಲಿಲ್ಲ. ಆದರೆ ಆಟದತ್ತ ಮುಂದುವರಿಯಲು ಇದು ಸರಿಯಾದ ಸಂದರ್ಭವಲ್ಲ ಎಂದು ಹೇಳಿರುವ ಬೋರ್ಡ್ ಪ್ರವಾಸ ರದ್ದುಗೊಳಿಸಲಾಗಿದೆ.