Thursday, October 1, 2026

BDA Apartments

ಕಾವೇರಿ ನೀರಾವರಿ ನಿಗಮ ನಿಯಮಿತ, ಹುಣಸೂರು… BDA JK_Adv BDA Adv
Home Front Page ಮೈಸೂರು ದಸರಾ: ಸಿಎಂ ಡಿಕೆಶಿ ಮತ್ತು ಡಿಸಿಎಂ ಪರಮೇಶ್ವರ್‌ ಗೆ ಅಧಿಕೃತ ಆಹ್ವಾನ

ಮೈಸೂರು ದಸರಾ: ಸಿಎಂ ಡಿಕೆಶಿ ಮತ್ತು ಡಿಸಿಎಂ ಪರಮೇಶ್ವರ್‌ ಗೆ ಅಧಿಕೃತ ಆಹ್ವಾನ

ಬೆಂಗಳೂರು,ಅಕ್ಟೋಬರ್‌,1,2026 (www.justkannad.in) :  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಈ ಮಧ್ಯೆ ಜಿಲ್ಲಾಡಳಿತ ವತಿಯಿಂದ ಇಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರಿಗೆ ಅಧಿಕೃತ ಆಹ್ವಾನ ನೀಡಲಾಯಿತು.

ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ: ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಯ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್  ಮತ್ತು ಡಿಸಿಎಂ ಪರಮೇಶ್ವರ್‌ ಅವರಿಗೆ ಮೈಸೂರು ದಸರಾ 2026 ರ ಆಹ್ವಾನ ಪತ್ರಿಕೆ ನೀಡಿ ಗೌರವಪೂರ್ವಕವಾಗಿ ಆಹ್ವಾನ ನೀಡಿದರು.Mysuru Dasara mysore dasara-dks.jpg1 mysore dasara dks.jpg1

ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಜಿ ಅವರು ಇಂದು ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಯತೀಂದ್ರ ಸಿದ್ದರಾಮಯ್ಯ  ಅವರಿಗೆ ಮೈಸೂರು ದಸರಾ 2026 ರ ಆಹ್ವಾನ ಪತ್ರಿಕೆ ನೀಡಿ ಗೌರವಪೂರ್ವಕವಾಗಿ ಆಹ್ವಾನ ನೀಡಿದರು.Mysuru Dasara mysore dasara-dks.jpg12 mysore dasara dks.jpg12

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ.ಜಿ,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್,  ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.invitation jk02_new jk02 new

 

English Summary
Title

Mysuru Dasara 2026: Karnataka Extends Official Invitations for Grand Festival

Short Description
The official invitation for the grand Mysuru Dasara 2026 festival is being extended to Karnataka Chief Minister D.K. Shivakumar and state leaders. Scheduled from 11 October to 21 October 2026, this spectacular 11-day Naada Habba (State Festival) will be inaugurated by Shri Abhinav Gavisiddheshwara Mahaswamiji atop Chamundi Hill. Under the government's leadership, the 2026 celebrations are being scaled up significantly. Elaborate plans include inviting Chief Ministers from all southern states, hosting a massive cultural parade, and organizing drone and air shows. The mega cultural extravaganza will culminate with the world-famous Grand Jamboo Savari elephant procession on Vijayadashami
Keywords
Mysuru Dasara, invitation, CM DK Shivakumar, DCM, Parameshwara, Minister Yathindra Siddaramaiah