Wednesday, July 29, 2026

BDA Apartments

Home Front Page ಬಿಜೆಪಿ ನಾಯಕ  ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ತಾಯಿಗೆ ಕೊರೋನಾ ಸೋಂಕು: ಆಸ್ಪತ್ರೆಗೆ ದಾಖಲು…

ಬಿಜೆಪಿ ನಾಯಕ  ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ತಾಯಿಗೆ ಕೊರೋನಾ ಸೋಂಕು: ಆಸ್ಪತ್ರೆಗೆ ದಾಖಲು…

ನವದೆಹಲಿ,ಜೂ,9,2020(www.justkannada.in):  ಬಿಜೆಪಿಗೆ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ತಾಯಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜ್ಯೋತಿರಾದಿತ್ಯ  ಸಿಂಧಿಯಾ ಹಾಗೂ ಅವರ ತಾಯಿ ಮಾಧವಿ ರಾಜೆ ಸಿಂಧಿಯಾ ಇಬ್ಬರಿಗೂ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಅವರು ದೆಹಲಿಯ ಮ್ಯಾಕ್ಸ್​ ಆಸ್ಪತ್ರೆಯಲ್ಲಿ  ದಾಖಲು ಮಾಡಲಾಗಿದೆ. ಕೊರೋನಾ ಲಕ್ಷಣಗಲು ಕಂಡುಬಂದ ಹಿನ್ನೆಲೆಯಲ್ಲಿ ಸಿಂಧಿಯಾ ಹಾಗೂ ಅವರ ತಾಯಿಯನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು, ಈಗ ಪಾಸಿಟಿವ್ ಬಂದಿದೆ ಎಂದು ಹೇಳಲಾಗಿದೆ.coronal-bjp-leader-jyotiraditya-scindia-her-mother

ಹಾಗೆಯೇ, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರಲ್ಲೂ ಜ್ವರ, ಗಂಟಲು ನೋವಿನಂತಹ ಕರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ಇಂದು ಬೆಳಗ್ಗೆ ಕೊವಿಡ್​-19 ಟೆಸ್ಟ್​ಗೆ ಒಳಪಟ್ಟಿದ್ದಾರೆ.

Key words: Coronal -BJP leader- Jyotiraditya Scindia-  her mother.