Tuesday, September 8, 2026

BDA Apartments

Home Front Page ಸೋಮವಾರದಿಂದ (ಜೂ.8) ಮೈಸೂರು ಝೂ ರೀ ಓಪೆನ್

ಸೋಮವಾರದಿಂದ (ಜೂ.8) ಮೈಸೂರು ಝೂ ರೀ ಓಪೆನ್

ಮೈಸೂರು, ಜೂನ್ 06, 2020 (www.justkannada.in): ಮೈಸೂರು ಝೂ ಜೂನ್ 8 ರಿಂದ ರೀ ಓಪನ್ ಆಗಲಿದೆ.

ಸೋಮವಾರದಿಂದ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಈ ಸಂಬಂಧ ಮೃಗಾಲಯ ಪ್ರಾಧಿಕಾರ ಅನುಮತಿ ನೀಡಿದೆ. ಕೊರೊನ ಹಿನ್ನೆಲೆ ಎರಡು ತಿಂಗಳುಗಲ ಕಾಲ ಸಾರ್ವಜನಿಕ ವೀಕ್ಷಣೆಗೆ ನಿರ್ಭಂದ ವಿಧಿಸಿದ್ದ ಪ್ರಾಧಿಕಾರ ಮೃಗಾಲಯ ಪ್ರಾಧಿಕಾರ ಮಾರ್ಗಸೂಚಿ ಅನ್ವಯ ವೀಕ್ಷಣೆಗೆ ಅವಕಾಶ ನೀಡುತ್ತಿದೆ.

ಹಲವು ಮುಂಜಾಗ್ರತಾ ಕ್ರಮಗಳೊಂದಿಗೆ ಮೃಗಾಲಯ ಓಪನ್ ಆಗಲಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಜತೆಗೆ ಮೃಗಾಲಯಕ್ಕೆ ಭೇಟಿ ನೀಡುವವರಿಗೆ ಥರ್ಮಲ್ ಸ್ಕ್ರೀನಿಂಗ್.
ಕಂಬಿಗಳನ್ನು ಮುಟ್ಟದಂತೆ ಸೂಚನೆ ನೀಡಲಾಗುತ್ತದೆ. ಈ ಸಂಬಂಧ ಹಲವು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಮೃಗಾಲಯ ಪ್ರಾಧಿಕಾರ ತೀರ್ಮಾನಿಸಿದೆ.