Sunday, October 25, 2026

Dasara Wishes

ಆಸ್ತಿ ವಿವಾದಕ್ಕೆ ಹರಿದ ನೆತ್ತರು: ಗುಂಡಿಕ್ಕಿ ಆರು ಮಂದಿಯ ಹತ್ಯೆ DasraWishes_JK DasraWishes JK
Happy Dasara
Home Crime ಕೊಳ್ಳೇಗಾಲದಲ್ಲಿ ಬಟ್ಟೆ ಅಂಗಡಿಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ ನಷ್ಟ

ಕೊಳ್ಳೇಗಾಲದಲ್ಲಿ ಬಟ್ಟೆ ಅಂಗಡಿಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ ನಷ್ಟ

ಕೊಳ್ಳೇಗಾಲ, ಜೂ.7, 2020 (www.justkannada.in): ಬಟ್ಟೆ ಅಂಗಡಿಯೊಂದಕ್ಕೆ ಬೆಂಕಿಬಿದ್ದು, ಲಕ್ಷಾಂತರ ರೂ.ನಷ್ಟ ಸಂಭವಿಸಿರುವ ದುರ್ಘಟನೆ ಜಯ್​​ ಇನ್ಸ್​​ಟ್ಯೂಟ್ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ದಕ್ಷಿಣ ಬಡವಾಣೆಯ ಜಯ್​​ ಇನ್ಸ್​​ಟ್ಯೂಟ್ ರಸ್ತೆಯಲ್ಲಿನ ಮೀನಾಕ್ಷಿ ಟೆಕ್ಸ್​​ಟೆಲ್ಸ್ ಬೆಂಕಿಗೆ ಆಃಹುತಿಯಾಗಿದೆ.
ಸುಮಾರು 9.45ರ ವೇಳೆ ಅಂಗಡಿ ಮಾಲೀಕ ಪುನಮ್ ಸಿಂಗ್ ವ್ಯಾಪಾರ ಮುಗಿಸಿ, ಅಂಗಡಿ ಬಂದ್ ಮಾಡುವ ವೇಳೆ ಒಳಗಡೆಯಿಂದ ಭಾರಿ ಶಬ್ಧದೊಂದಿಗೆ, ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.

ಅಂಗಡಿ‌ ಬಂದ್ ಮಾಡುವ ವೇಳೆ ಬಾಗಿಲು ಸಿಡಿದು ಬೆಂಕಿ ಕೆನ್ನಾಲಿಗೆ ಹೊರಗೆ ಬಂದ ಪರಿಣಾಮ ಅಂಗಡಿ ಮಾಲೀಕ ಪುನಮ್ ಸಿಂಗ್ ತೆಲೆಗೆ ತೀರ್ವ ಪೆಟ್ಟಾಗಿದ್ದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಸ್ಥಳಕಾಗಮಿಸಿದ ಅಗ್ನಿ ಶಾಮಕ‌ ದಳ ಸಿಬ್ಬಂದಿಗಳು ಹೊತ್ತಿ ಹುರಿಯುತ್ತಿದ ಬೆಂಕಿ ನಂದಿಸಿದ್ದು. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಭೇಟಿ‌ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಅಂಗಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿಯಾಗಿವೆ. ಆದರೆ ಆಕಸ್ಮಿಕ ಬೆಂಕಿ ಹೊತ್ತಲು ವಿದ್ಯುತ್ ಶಾರ್ಕ್ ಸರ್ಕ್ಯೂಟ್ ಕಾರಣವೋ ? ಅಥವಾ ಬೇರೇನೋ ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ.