Thursday, August 6, 2026

BDA Apartments

Home Front Page ಮೈಸೂರಿನಲ್ಲಿ ಕರೋನಾ ವಾರಿಯರ್ಸ್ ಗೆ ಸನ್ಮಾನ….

ಮೈಸೂರಿನಲ್ಲಿ ಕರೋನಾ ವಾರಿಯರ್ಸ್ ಗೆ ಸನ್ಮಾನ….

ಮೈಸೂರು,ಜೂ,1,2020(www.justkannada.in):  ಕರೋನಾ ವೈರಸ್ ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ಕರೋನಾ ವಾರಿಯರ್ಸ್ ಗೆ ಮೈಸೂರಿನಲ್ಲಿ ಸನ್ಮಾನಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಕರೋನಾ ವಾರಿಯರ್ಸ್ ಗೆ ಸನ್ಮಾನ ನಡೆಸಲಾಯಿತು. ತೊಣಚಿಕೊಪ್ಪಲಿನ ಅರಳಿ ಮರದ ಬಳಿ ಸನ್ಮಾನ ಕಾರ್ಯಕ್ರಮ ನಡೆಯಿತು.  ಮಾಜಿ ಶಾಸಕ ಎಂ. ಕೆ. ಸೋಮಶೇಖರ್ ರಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ವೈದ್ಯರು, ಪೊಲೀಸರು, ಆರೋಗ್ಯ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ “ಆರಕ್ಷಕ-ಆರೋಗ್ಯ ಸಿಬ್ಬಂದಿಗಳು-ಪೌರಕಾರ್ಮಿಕರ ರಕ್ಷಣೆ ನಮ್ಮ ಹೊಣೆ” ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಡಿಸಿಪಿ ಪ್ರಕಾಶ್ ಗೌಡ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜೆ. ಗೋಪಿ, ವೈ. ಡಿ. ರಾಜಣ್ಣ, ಕೆ. ಎಸ್. ಶಿವರಾಮ್ ಸೇರಿದಂತೆ ಇತರರು ಭಾಗಿಯಾಗಿದ್ದರು.

Key words: Corona Warriors- thanked- Mysore