Monday, August 10, 2026

BDA Apartments

Home Cinema ಕೊರೊನಾ ಏಫೆಕ್ಟ್: ಮೈಸೂರಲ್ಲಿ ಡಾ.ರಾಜ್ ಪುಥ್ಥಳಿಗೂ ಮಾಸ್ಕ್ ಹಾಕಿದ ಅಭಿಮಾನಿಗಳು

ಕೊರೊನಾ ಏಫೆಕ್ಟ್: ಮೈಸೂರಲ್ಲಿ ಡಾ.ರಾಜ್ ಪುಥ್ಥಳಿಗೂ ಮಾಸ್ಕ್ ಹಾಕಿದ ಅಭಿಮಾನಿಗಳು

ಮೈಸೂರು, ಏಪ್ರಿಲ್ 24, 2020 (www.justkannada.in): ಕೊರೊನಾ ಏಫೆಕ್ಟ್ ಹಿನ್ನೆಲೆಯಲ್ಲಿ ಡಾ. ರಾಜ್ ಪುಥ್ಥಳಿಗೂ ಅಭಿಮಾನಿಗಳು ಮಾಸ್ಕ್ ಹಾಕಿದ್ದಾರೆ.

ವರನಟ ಡಾ.ರಾಜ್ ಕುಮಾರ್ ರವರ ೯೧ ವರ್ಷದ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಬಳಿ ಇರುವ ರಾಜ್ ಪುಥ್ಥಳಿಗೆ ಮಾಸ್ಕ್ ಹಾಕಲಾಯಿತು. ಬಳಿಕ ಜನ್ಮ ದಿನ ಆಚರಿಸಲಾಯಿತು.

ಡಾ.ರಾಜ್ ಪುಥ್ಥಳಿಗೆ ಪುಷ್ಪಾರ್ಚನೆ ಮಾಡಿದ ಕೆ.ಆರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀನಿವಾಸ್ ರಾಜ್ ಕುರಿತು ಮಾತನಾಡಿದರು. ಸಾಮಾಜಿಕ ಅಂತರ ಕಾಯ್ದುಕೊಂಡು ರಾಜ್ ಜನ್ಮದಿನವನ್ನು ಅಭಿಮಾನಿಗಳು ಆಚರಿಸಿದರು.

ಮಯೂರ ಕನ್ನಡ ಯುವಕರ ಸಂಘದ ವತಿಯಿಂದಲೂ ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಜನ್ಮ ದಿನಾಚರಣೆ ನಡೆಯಿತು.