Tuesday, October 6, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ಜನ ಸಂದಣಿ ತಡೆಯಲು ಲಾಠಿ ಹಿಡಿದು ಬೀದಿಗಿಳಿದ ಶಿವಮೊಗ್ಗ ತಹಸೀಲ್ದಾರ್

ಜನ ಸಂದಣಿ ತಡೆಯಲು ಲಾಠಿ ಹಿಡಿದು ಬೀದಿಗಿಳಿದ ಶಿವಮೊಗ್ಗ ತಹಸೀಲ್ದಾರ್

ಶಿವಮೊಗ್ಗ, ಮಾರ್ಚ್ 24, 2020 (www.justkannada.in): ಸ್ವತಃ ತಹಶೀಲ್ದಾರ್ ಅವರೇ ಲಾಠಿ ಹಿಡಿದು, ಜನರನ್ನು ನಿಯಂತ್ರಿಸಲು ತೊಡಗಿದ್ದಾರೆ.

ಜನರಿಗೆ ಕೊರೊನಾ ವೈರಸ್ ಬಗ್ಗೆ ಒಂಚೂರು ಭಯವಿಲ್ಲದಂತೆ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ಶಿವಮೊಗ್ಗದಲ್ಲಿ ಕಂಡು ಬಂದಿತ್ತು.

ಮೀರಿದ ಜನಸಂದಣಿ ನಿಯಂತ್ರಣಕ್ಕೆ ಸ್ವತಹ ಲಾಠಿ ಹಿಡಿದ ತಹಶೀಲ್ದಾರ್ ಗಿರೀಶ್, ಜನರ ನಿಯಂತ್ರಣಕ್ಕೆ ತೊಡಗಿದ್ರು. ಸಂಪೂರ್ಣ ಲಾಕ್ ಡೌನ್, ಕರ್ಪ್ಯೂ ಘೋಷಣೆ ಮಾಡಲಾಗಿದೆ. ಹೀಗಿದ್ದು ತರಕಾರಿ ಖರೀದಿಸಲು ಜನರು ಗುಂಪು ಗೂಡುತ್ತಿರುವುದು ಸರಿಯಲ್ಲ ಎಂದು ಬುದ್ಧಿ ಹೇಳಿದರು.

ರಾಜ್ಯದಾದ್ಯಂತ ಇಂದಿನಿಂದ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ. ಆದ್ರೇ.. ನಾಳೆ ಯುಗಾದಿಯ ಹಬ್ಬದ ದಿನವಾಗಿರುವುದರಿಂದ, ರಾಜ್ಯದ ಅನೇಕ ಮಾರುಕಟ್ಟೆಗಳಲ್ಲಿ ಜನಜಂಗುಳಿಯಿಂದ ಕೂಡಿದೆ.