ಮೈಸೂರಲ್ಲಿ ಎರಡನೆ ಕೇಸ್ : ಇದೇ ಕರೊನಾ ಪಾಸಿಟಿವ್ ವ್ಯಕ್ತಿಯ ರೂಟ್ ಮ್ಯಾಪ್..

 

ಮೈಸೂರು, ಮಾ.23, 2020 : (www.justkannada.in news ) ಸುಮಾರು 46 ವರ್ಷದ ವ್ಯಕ್ತಿ ಮಾ.21 ರಂದು ದುಬೈನಿಂದ ಫ್ಲೈಟ್ ನಲ್ಲಿ ರಾತ್ರಿ 9.50 ಕ್ಕೆ ಹೊರಟಿದ್ದ ವ್ಯಕ್ತಿ. 22ರಂದು ಬೆಳಗ್ಗೆ 2.50 ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ.

ಏರ್ ಬಸ್ ನಲ್ಲಿ ಆಕಾಶ್ ಮೆಡಿಕಲ್ ಆಸ್ಪತ್ರೆ ಕಳುಹಿಸಲಾಗಿದೆ. ಚಕಪ್ ನಂತರ ವಾಪಾಸ್ ವಿಮಾನ ನಿಲ್ದಾಣಕ್ಕೆ. ನಂತರ ಏರ್ ಪೋರ್ಟ್ ಟ್ಯಾಕ್ಸಿಯಲ್ಲಿ ಮೈಸೂರಿಗೆ ಪ್ರಯಣ.

carona-positve-case-mysore-root-map

ನಡುವೆ ಬೆಳಗ್ಗೆ 6.30 ಕೆಂಗೇರಿ ಬಳಿ ಟೀ ಕುಡಿದಿದ್ದಾನೆ. ಬೆ.8.30 ಕ್ಕೆ ಮೈಸೂರಿಗೆ ಆಗಮನ. ಬೆಳಗ್ಗೆ 8.30 ಕ್ಕೆ ಮೀನಾ ಬಜಾರ್ ರೂಂಗೆ ಆಗಮನ. ಮದ್ಯಾಹ್ನ 1.45 ಕ್ಕೆ ಕೆ ಆರ್ ಆಸ್ಪತ್ರೆಗೆ ದಾಖಲು.

ಕೆ.ಆರ್.ಆಸ್ಪತ್ರೆಗೆ ಬಂದು ಕರೊನಾ ಸೆಂಟರ್‌ನಲ್ಲಿ ತಪಾಸಣೆ.  ಕೂಡಲೇ ಐಸೋಲೇಷನ್‌ನಲ್ಲಿಟ್ಟು ಮಾದರಿ ಸಂಗ್ರಹಿಸಿ ಪರೀಕ್ಷೆ. ಮಾ.23ರಂದು ವರದಿಯಲ್ಲಿ ಕರೊನಾ ಪಾಸಿಟಿವ್ ಇರುವುದು ಖಚಿತ.
ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ‌ ಕಲ್ಯಾಣ ಇಲಾಖೆಯಿಂದ ಮಾಹಿತಿ ಸಂಗ್ರಹ.

key words : carona-positve-case-mysore-root-map