Monday, September 21, 2026

BDA Apartments

ಮತ್ತೆ ಒಂದಾಗುತ್ತಿದ್ದಾರೆ ಹೇಮಂತ್ ರಾವ್-ರಕ್ಷಿತ್ ಶೆಟ್ಟಿ BDA JK_Adv BDA Adv
Home Cinema ಮತ್ತೆ ಒಂದಾಗುತ್ತಿದ್ದಾರೆ ಹೇಮಂತ್ ರಾವ್-ರಕ್ಷಿತ್ ಶೆಟ್ಟಿ

ಮತ್ತೆ ಒಂದಾಗುತ್ತಿದ್ದಾರೆ ಹೇಮಂತ್ ರಾವ್-ರಕ್ಷಿತ್ ಶೆಟ್ಟಿ

ಬೆಂಗಳೂರು, ಮಾರ್ಚ್ 19, 2020 (www.justkannada.in): ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ಹೇಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಜೋಡಿ ಈಗ ಮತ್ತೆ ಒಂದಾಗುತ್ತಿದ್ದಾರೆ.

ಹೌದು, ಈ ಬಗ್ಗೆ ಹೇಮಂತ್ ರಾವ್ ಟ್ವೀಟ್ ಮಾಡಿದ್ದು, ‘ನಾಳೆ ಬೆಳಿಗ್ಗೆ 10 ಗಂಟೆಗೆ ಮುಂದಿನ ಪ್ರಾಜೆಕ್ಟ್ ಬಗ್ಗೆ ಘೋಷಣೆ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.

2016 ರಲ್ಲಿ ತೆರೆ ಕಂಡಿದ್ದ ರಕ್ಷಿತ್ ಶೆಟ್ಟಿ, ಅನಂತ್ ನಾಗ್, ಶೃತಿ ಹಾಸನ್, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ಗೋದಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಉತ್ತಮ ಪ್ರಶಂಸೆಗೆ ಪಾತ್ರವಾಗಿತ್ತು.

ಇದೀಗ ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಒಂದಾಗುತ್ತಿರುವುದು ಸಿನಿ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.