Thursday, August 13, 2026

BDA Apartments

Home Crime ಮಹಿಳಾ ಸಿಬ್ಬಂದಿ ಜತೆ ಕಂಪ್ಯೂಟರ್ ಆಪರೇಟರ್ ಅಸಭ್ಯ ವರ್ತನೆ: ಸಿಸಿ ಟಿವಿಯಲ್ಲಿ ಸೆರೆ…

ಮಹಿಳಾ ಸಿಬ್ಬಂದಿ ಜತೆ ಕಂಪ್ಯೂಟರ್ ಆಪರೇಟರ್ ಅಸಭ್ಯ ವರ್ತನೆ: ಸಿಸಿ ಟಿವಿಯಲ್ಲಿ ಸೆರೆ…

ದಾವಣಗೆರೆ,ಮಾ,16,2020(www.justkannada.in):  ಮಹಿಳಾ ಸಿಬ್ಬಂದಿ ಜತೆ ಅಸಭ್ಯ ವರ್ತನೆ ತೋರಿರುವ ಆರೋಪ ಗ್ರಾಮಪಂಚಾಯತ್ ಕಂಪ್ಯೂಟರ್ ಅಪರೇಟರ್ ವಿರುದ್ದ ಕೇಳಿ ಬಂದಿದೆ.

ದಾವಣಗೆರೆ ಜಿಲ್ಲೆಯ ಹೊನ್ನೂರು ಗ್ರಾಮ ಪಂಚಾಯತ್ ನ ಕಂಪ್ಯೂಟರ್ ಅಪರೇಟರ್ ವೆಂಕಟೇಶ್ ವಿರುದ್ದವೇ ಈ ಆರೋಪ ಮಾಡಲಾಗಿದೆ. ವೆಂಕಟೇಶ್ ಮಹಿಳಾ  ಸಿಬ್ಬಂದಿಯ ಜತೆ ಅಸಭ್ಯವಾಗಿ ವರ್ತಿಸಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಹಿಳಾ ಸಿಬ್ಬಂದಿ ಬಯೋಮೆಟ್ರಿಕ್ ನಲ್ಲಿ ಹಾಜರಿ ಹಾಕುವ ವೇಳೆ ಮೈ ಕೈ ಮುಟ್ಟಿ ಅಸಭ್ಯ ವರ್ತನೆ ತೋರಿದ್ದಾನೆ.

ಕಂಪ್ಯೂಟರ್ ಅಪರೇಟರ್ ವೆಂಕಟೇಶ್ ಕುಚೇಷ್ಟೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಈ ಕುರಿತು ನೊಂದ ಮಹಿಳೆ ದೂರು ನೀಡಿದ್ದಾರೆ ಎನ್ನಲಾಗಿದೆ. ಕಳೆದ 6 ತಿಂಗಳಿಂದಲೂ ಈತ  ಈ ರೀತಿ ಕಿರುಕುಳ ನೀಡುತ್ತಿದ್ದ ಎಂದು ನೊಂದ ಮಹಿಳೆ ತಿಳಿಸಿದ್ದಾರೆ.

Key words: Computer operator -rude behavior – female -staff