Sunday, August 9, 2026

BDA Apartments

Home Front Page ರಾಜ್ಯದಲ್ಲಿ 100 ಜನ ಕರೋನಾ ಶಂಕಿತರ ಮೇಲೆ ನಿಗಾ: ಸಿಎಂ ಬಿ.ಎಸ್.ಯಡಿಯೂರಪ್ಪ

ರಾಜ್ಯದಲ್ಲಿ 100 ಜನ ಕರೋನಾ ಶಂಕಿತರ ಮೇಲೆ ನಿಗಾ: ಸಿಎಂ ಬಿ.ಎಸ್.ಯಡಿಯೂರಪ್ಪ

ಬೆಳಗಾವಿ, ಮಾರ್ಚ್ 15, 2020 (www.justkannada.in): ರಾಜ್ಯದಲ್ಲಿ 100ಜನ ಕರೋನಾ ಶಂಕಿತರ ಮೇಲೆ ನಿಗಾ ಇಡಿಸಲಾಗಿದೆ. ಸರಕಾರದಿಂದ ಕರೋನಾ ಎದುರಿಸಲು ಸನ್ನದ್ದವಾಗಿ ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಭಾನುವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕರೋನಾ ನ ತಡೆಗೆ ಆರೋಗ್ಯ ಇಲಾಖೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ 6 ಜನರ ಮೇಲೆ ಕರೋನಾ ಪತ್ತೆಯಾಗಿದೆ. 100 ಜನರ ಮೇಲೆ ಶಂಕೆ ವ್ಯಕ್ತವಾಗಿದ್ದು, ಅವರ ಮೇಲೆ ಆರೋಗ್ಯ ಇಲಾಖೆ ನಿಗಾ‌ ವಹಿಸಿದೆ ಎಂದು ತಿಳಿಸಿದರು.

ರಾಜ್ಯದ ಜನತೆ ಆತಂಕ ಪಡುವ ಅಗತ್ಯ ವಿಲ್ಲ. ಸರಕಾರ ಕರೋನಾ ತಡೆಯುವಲ್ಲಿ ಎಲ್ಲ ರೀತಿಯ ಸೌಲಭ್ಯ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.