Monday, August 10, 2026

BDA Apartments

Home Front Page ಕೋರನಾ‌ ನಿಯಂತ್ರಣದಲ್ಲಿ ಗೃಹ ಇಲಾಖೆಯಿಂದ ಮಹತ್ತರ ಜವಾಬ್ದಾರಿ ನಿರ್ವಹಣೆ

ಕೋರನಾ‌ ನಿಯಂತ್ರಣದಲ್ಲಿ ಗೃಹ ಇಲಾಖೆಯಿಂದ ಮಹತ್ತರ ಜವಾಬ್ದಾರಿ ನಿರ್ವಹಣೆ

ಬೆಳಗಾವಿ, ಮಾರ್ಚ್ 15, 2020 (www.justkannada.in): ಕೋರನಾ‌ ನಿಯಂತ್ರಣದಲ್ಲಿ ಗೃಹ ಇಲಾಖೆ ಮಹತ್ತರ ಜವಾಬ್ದಾರಿ ನಿಭಾಯಿಸುತ್ತಿದೆ. ಎಲ್ಲ ವಿಮಾನ‌ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರ ಚೆಕ್ ಮಾಡಲಾಗುತ್ತಿದೆ ಎಂದು ಬೆಳಗಾವಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಬೆಳಗಾವಿ ವಲಯದಲ್ಲಿನ ಎಲ್ಲ ರೀತಿ ತಪಾಸಣೆ ಮಾಡಲಾಗುತ್ತಿದೆ. ಖಾಸಗಿ ವಾಹನದಲ್ಲಿ ಬರುವವರನ್ನೂ ತಪಾಸಣೆ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಈ ವಿಚಾರದಲ್ಲಿ ಜನರ ಸಹಕಾರ ಹಾಗೂ ಇಲಾಖೆಗಳ ಸಹಭಾಗಿತ್ವ ಚನ್ನಾಗಿದೆ. ಕರೋನಾ ವೈರಸ್ ಹರಡಿದ್ದು ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರ ಸಹಕಾರ ಸರ್ಕಾರಕ್ಕೆ ಸಿಕ್ಕಿದೆ. ಕರೋನಾ ವೈರಸ್ ತಪಾಸಣೆ ಪ್ರಕ್ರಿಯೆಯಲ್ಲಿ ಹಾಗೂ ಜನದಟ್ಟನೆ ಪ್ರದೇಶದಲ್ಲಿ ಕೆಲಸ ನಿರ್ವಹಿಸುವ ಪೋಲಿಸರಿಗೆ ಮಾಸ್ಕ್ ನೀಡಲಾಗುವುದು ಎಂದು ತಿಳಿಸಿದ್ದಾರೆ.