Sunday, August 9, 2026

BDA Apartments

Home Crime ವಿವಾಹಿತ ಮಹಿಳೆ ಕೊಂದು ಹೂತು ಹಾಕಿದ್ದ ಪ್ರಿಯಕರ ಪೊಲೀಸರ ಬಲೆಗೆ

ವಿವಾಹಿತ ಮಹಿಳೆ ಕೊಂದು ಹೂತು ಹಾಕಿದ್ದ ಪ್ರಿಯಕರ ಪೊಲೀಸರ ಬಲೆಗೆ

ಮೈಸೂರು, ಮಾರ್ಚ್ 15, 2020 (www.justkannada.in): 45 ದಿನದ ಹಿಂದೆ ಮಾಡಿದ್ದ ಕೊಲೆ ಪ್ರಕರಣವನ್ನು ಮೈಸೂರಿನ ತಲಕಾಡು ಠಾಣೆ ಪೊಲೀಸರು ಬೇಧಿಸಿದ್ದಾರೆ.

ವಿವಾಹಿತ ಮಹಿಳೆ ಕೊಂದು ಹೂತು ಹಾಕಿದ್ದ ಪ್ರಿಯಕರ. ಈ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕಿನ ಅಕ್ಕೂರು ದೊಡ್ಡಿ ಗ್ರಾಮದಲ್ಲಿ ನಡೆದಿತ್ತು.

ರಾಜಮ್ಮ 42 ಕೊಲೆಯಾಗಿದ್ದ ದುರ್ದೈವಿ. ಮಹೇಶ್ ಕೊಲೆ ಮಾಡಿದ ಆರೋಪಿ. ಈನ ಸ್ನೇಹಿತರಾದ ಚೌಡಯ್ಯ, ಮಹದೇವು, ಸೋಮು ಬಂಧಿತ ಆರೋಪಿಗಳು.

ಈತ ಸ್ನೇಹಿತರಾದ ಸೋಮ ಚೌಡಯ್ಯ ಮಹದೇವ ಜೊತೆ ಸೇರಿ ಶವ ಹೂತು ಹಾಕಿದ್ದ. ರಾಜಮ್ಮ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮನಗಹಳ್ಳಿ ಗ್ರಾಮದವರು.

ರಾಜಮ್ಮ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಮಹೇಶ್. ಗಂಡನನ್ನು ಬಿಟ್ಟು ಬರುತ್ತೇನೆ ಮದುವೆಯಾಗು ಎಂದು ಪೀಡಿಸುತ್ತಿದ್ದ ರಾಜಮ್ಮ. ಈಕೆ ಕಾಟದಿಂದ ಬೇಸತ್ತು ಕೊಲೆ ಮಾಡಿದ ಮಹೇಶ್.

ರಾಜಮ್ಮ ನಾಪತ್ತೆಯಾದ ಬಗ್ಗೆ ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೂತು ಹಾಕಿದ್ದ ಶವ ಹೊರತೆಗೆದು ಪ್ರಕರಣ ಬೇದಿಸಿರುವ ಪೊಲೀಸರು.