Friday, August 14, 2026

BDA Apartments

Home Cinema ಕೊರೋನಾ ಭೀತಿ: ಹುಟ್ಟುಹಬ್ಬದಂದು ಯಾರೂ ಮನೆ ಬಳಿ ಬರಬೇಡಿ- ಅಭಿಮಾನಿಗಳಿಗೆ ಮನವಿ ಮಾಡಿದ ನಟ ಪುನೀತ್...

ಕೊರೋನಾ ಭೀತಿ: ಹುಟ್ಟುಹಬ್ಬದಂದು ಯಾರೂ ಮನೆ ಬಳಿ ಬರಬೇಡಿ- ಅಭಿಮಾನಿಗಳಿಗೆ ಮನವಿ ಮಾಡಿದ ನಟ ಪುನೀತ್ ರಾಜ್ ಕುಮಾರ್…

ಬೆಂಗಳೂರು,ಮಾ,14,2020(www.justkannada.in):  ಮಾರ್ಚ್ 17 ರಂದು ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಇದೆ. ಆದರೆ ಕೊರೋನಾ ವೈರಸ್ ಭೀತಿ ಎಲ್ಲಡೆ ತಾಂಡವಾಡುತ್ತಿದ್ದು ಈ ಹಿನ್ನೆಲೆ ಈ ಬಾರಿ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸದೇ ಇರಲು ನಟ ಪುನೀತ್  ರಾಜ್ ಕುಮಾರ್  ನಿರ್ಧರಿಸಿದ್ದಾರೆ.

ಈ ಬಗ್ಗೆ ವಿಡಿಯೋ ಮಾಡಿರುವ ನಟ ಪುನೀತ್ ರಾಜ್ ಕುಮಾರ್, ಎಲ್ಲಾ ಅಭಿಮಾನಿ ದೇವರಿಗೆ ನನ್ನ ನಮಸ್ಕಾರ. ಈ ವರ್ಷ ಮಾರ್ಚ್ 17 ಕ್ಕೆ ನಾನು ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ಹಾಗಾಗಿ ಯಾರೂ ಈ ವರ್ಷ ನನ್ನ ಮನೆ ಹತ್ರ ಬೇರೆ ಬೇರೆ ಊರುಗಳಿಂದ ಬರಬೇಡಿ. ನಾನು ಮನೆಯಲ್ಲೂ ಇರಲ್ಲ. ರಾಜ್ಯ ಸರ್ಕಾರದ ಆದೇಶಕ್ಕೆ ನಾವೆಲ್ಲೂ ಬದ್ಧರಾಗಿರಬೇಕು ಎಂದು ಮನವಿ ಮಾಡಿದ್ದಾರೆ.

ಇಡೀ ವಿಶ್ವದಲ್ಲೇ ಈಗ ಏನು ತೊಂದರೆ ನಡೆಯುತ್ತಿದೆ, ಅದಕ್ಕೆ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ನಾನೂ ಕೈಜೋಡಿಸುತ್ತೇನೆ. ನಿಮ್ಮ ಪ್ರೀತಿ ವಿಶ್ವಾಸ ಹೀಗೇ ಇರುತ್ತದೆ ಎಂದು ನಾನು ಭಾವಿಸಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದು  ವಿಡಿಯೋ ಮೂಲಕ ನಟ ಪುನೀತ್ ರಾಜ್ ಕುಮಾರ್ ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.

Key words: corona virus- Actor Punith Raj Kumar- appeals – fans.