Wednesday, August 5, 2026

BDA Apartments

Home Crime  ರೈತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು…

 ರೈತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು…

ಮೈಸೂರು,ಮಾ,13,2020(www.justkannada.in):  ಬೆಳೆ ಕೈಕೊಟ್ಟ ಹಿನ್ನೆಲೆ ರೈತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಮುತ್ತುರಾಯನ ಹೊಸಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪುಟ್ಟಲಕ್ಷ್ಮಮ್ಮ ನೇಣಿಗೆ ಶರಣಾದ ರೈತ ಮಹಿಳೆ. ಸುಮಾರು 2.13 ಗುಂಟೆ ಜಮೀನು ಹೊಂದಿದ್ದು ಪುಟ್ಟಲಕ್ಷ್ಮಮ್ಮ. ಹುಣಸೂರು ಓವರಸೀಸ್ ಬ್ಯಾಂಕ್‌ನಲ್ಲಿ 5.5 ಲಕ್ಷ ಬೆಳೆ ಸಾಲ ಮಾಡಿಕೊಂಡಿದ್ದರು. ಜತೆಗೆ ಬೆಳೆ ಬೆಳೆಯಲು ಚಿನ್ನಾಭರಣಗಳನ್ನು ಗಿರವಿ ಇಟ್ಟಿದ್ದರು ಎನ್ನಲಾಗಿದೆ.

ಇನ್ನು ರೈತ ಮಹಿಳೆ ಪುಟ್ಟಲಕ್ಷ್ಮಮ್ಮ ಜಮೀನಿನಲ್ಲಿ ರಾಗಿ, ಹೊಗೆಸೊಪ್ಪು ಬೆಳೆದಿದ್ದರು. ಆದರೆ ಬೆಳೆ ಕೈ ಕೊಟ್ಟಿದ್ದು ಇದರಿಂದ ಬೇಸತ್ತು ಜಮೀನಿನನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು  ಪುಟ್ಟಲಕ್ಷ್ಮಮ್ಮ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-Farmer woman-commits- suicide