Sunday, August 9, 2026

BDA Apartments

Home Front Page ನಾಳೆ ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ…

ನಾಳೆ ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ…

ಬೆಂಗಳೂರು,ಮಾ,2,2020(www.justkannada.in):  ನಾಳೆ ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಕಾಂಗ್ರೆಸ್ ಶಾಸಕರಿಗೆ ಪಕ್ಷದಿಂದ ವಿಪ್ ಜಾರಿ ಮಾಡಲಾಗಿದೆ.

ಇಂದು ವಿಧಾನಮಂಡಲ ಬಜೆಟ್ ಅಧಿವೇಶನ ಆರಂಭವಾಗಿದ್ದು ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆ ಖಂಡಿಸಿ ಉಭಯ ಸದನಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಆದರೆ ಸದನದಲ್ಲಿ ಹೆಚ್ಚು ಕಾಂಗ್ರೆಸ್ ಶಾಸಕರು ಗೈರಾದ ಹಿನ್ನೆಲೆ ನಾಳೆ ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಕಾಂಗ್ರೆಸ್ ಪಕ್ಷ ವಿಪ್ ಜಾರಿ ಮಾಡಿದೆ.

ಸದನದಲ್ಲಿ ಬಿಜೆಪಿ ಎದುರಿಸಲು ಸಂಖ್ಯಾಬಲವೂ ಬೇಕು. ಅಲ್ಲದೆ ಶಾಸಕರು ಸದನ ಮತ್ತು ಶಾಸಾಕಾಂಗ ಪಕ್ಷದ ಸಭೆಗೂ ಗೈರಾಗುತ್ತಿದ್ದರು. ಹೀಗಾಗಿ ಇದನ್ನ ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಪಕ್ಷ, ಯಾವುದೇ ಕಾರಣವಿದ್ದರೂ ನಾಳೆ ಸದನಕ್ಕೆ ಹಾಜರಾಗಿ ಎಂದು ತಮ್ಮ ಶಾಸಕರಿಗೆ ಸೂಚನೆ ನೀಡಿದೆ.

Key words: Congress MLA-attend- tomorrow-session- Whip