Wednesday, September 16, 2026

BDA Apartments

ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣ: ಅಪರಾಧಿಗಳಿಗೆ ನಾಳೆ ಗಲ್ಲುಶಿಕ್ಷೆ ಜಾ...
Home Crime ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣ: ಅಪರಾಧಿಗಳಿಗೆ ನಾಳೆ ಗಲ್ಲುಶಿಕ್ಷೆ ಜಾರಿ ಇಲ್ಲ….

ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣ: ಅಪರಾಧಿಗಳಿಗೆ ನಾಳೆ ಗಲ್ಲುಶಿಕ್ಷೆ ಜಾರಿ ಇಲ್ಲ….

ನವದೆಹಲಿ,ಮಾ,2,2020(www.justkannada.in): ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಜಾರಿ ಮತ್ತೆ ವಿಳಂಬವಾಗಿದೆ. ನಾಳೆ ನಿಗದಿಯಾಗಿದ್ದ ಗಲ್ಲುಶಿಕ್ಷೆ ಮತ್ತೆ ಮುಂದೂಡಿಕೆಯಾಗಿದೆ.

ಸುಪ್ರೀಂ ಕೋರ್ಟ್ ನಲ್ಲಿ ನಿರ್ಭಯಾ ಅತ್ಯಾಚಾರ ಆರೋಪಿ ಪವನ್ ಗುಪ್ತ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ಇಂದು ವಜಾಗೊಳಿಸಲಾಗಿತ್ತು. ಆನಂತರ ಕೊನೆಯ ಪ್ರಯತ್ನ ಎನ್ನುವಂತೆ ರಾಷ್ಟ್ರಪತಿಗಳಿಗೆ ಕ್ಷಮಾಧಾನ ಅರ್ಜಿಯನ್ನುಅಪರಾಧಿ ಪವನ್ ಗುಪ್ತ ಸಲ್ಲಿಸಿದ್ದು ಅದೂ ಕೂಡ ರಾಷ್ಟ್ರಪತಿಗಳಿಂದ ಇಂದು ತಿರಸ್ಕೃತವಾಗಿತ್ತು.

ಆದರೆ ಈ ಎಲ್ಲಾ ಬೆಳವಣಿಗೆ ನಂತ್ರ, ಆರೋಪಿಗಳು ಸಲ್ಲಿಸಿದ್ದ ಪಾಟಿಯಾಲ ಕೋರ್ಟ್ ನ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಇದೀಗ ನಾಳಿನ ಗಲ್ಲು ಶಿಕ್ಷೆಯನ್ನು ಮುಂದೂಡಿ ಆದೇಶ ಹೊರಡಿಸಿದೆ. ಹೀಗಾಗಿ ನಾಳೆ ನಿರ್ಭಯಾ ಅತ್ಯಾಚಾರ, ಕೊಲೆ ಆರೋಪಿಗಳಿಗೆ ನಿಗಧಿಯಾಗಿದ್ದಂತ ಗಲ್ಲು ಶಿಕ್ಷೆ ಮುಂದೂಡಲ್ಪಟ್ಟಿದೆ.

ಈ ಹಿಂದೆ ಹೊರಡಿಸಿದ್ದ ಡೆತ್ ವಾರೆಂಟ್ ಗೆ ತಡೆ ನೀಡಲಾಗಿದ್ದು ಹೊಸ ಡೆತ್ ವಾರೆಂಟ್ ಹೊರಡಿಸುವವರೆಗೆ ಗಲ್ಲುಶಿಕ್ಷೆ ಜಾರಿ ಮುಂದೂಡಿಕೆ ಮಾಡಿ ಪಟಿಯಾಲ ಹೌಸ್ ಕೋರ್ಟ್ ಆದೇಶಿಸಿದೆ.

Key words: Nirbhaya -gang rape -murder –case-tomorrow –no –death sentence