Sunday, August 23, 2026

BDA Apartments

Home Cinema ಥೈಲ್ಯಾಂಡ್’ನಲ್ಲಿ ಬಾಕ್ಸಿಂಗ್ ಚಾಂಪಿಯನ್’ಶಿಪ್ ಗೆದ್ದ ಅರುಣ್ ಸಾಗರ್ ಪುತ್ರ

ಥೈಲ್ಯಾಂಡ್’ನಲ್ಲಿ ಬಾಕ್ಸಿಂಗ್ ಚಾಂಪಿಯನ್’ಶಿಪ್ ಗೆದ್ದ ಅರುಣ್ ಸಾಗರ್ ಪುತ್ರ

ಬೆಂಗಳೂರು, ಫೆಬ್ರವರಿ 28, 2020 (www.justkannada.in): ಥೈಲ್ಯಾಂಡ್ ನ ಪಟ್ಟಾಯದಲ್ಲಿ ನಡೆದ ಮ್ಯಾಕ್ಸ್ ಮುಯೆಥಾಯ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ಚಾಂಪಿಯನ್ ಪಟ್ಟ ಗಳಿಸಿದ್ದಾರೆ.

ಈ ವಿಷಯವನ್ನು ಖುದ್ದು ಅರುಣ್ ಸಾಗರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಗನ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅರುಣ್ ಸಾಗರ್ ಪುತ್ರನ ಸಾಧನೆಗೆ ನೆಟ್ಟಿಗರು ವಿಶ್ ಮಾಡಿದ್ದಾರೆ.

ಎದುರಾಳಿ ರೋಬೋಕಾಪ್ ಸೋರ್ ಹೊಡೆದುರುಳಿಸಿ ಗೆಲುವು ಕಂಡಿದ್ದಾರೆ ಅರುಣ್ ಸಾಗರ್ ಪುತ್ರ. ಅಂದಹಾಗೆ ಅಂತರರಾಷ್ಟ್ರೀಯ ಮಟ್ಟದ ಬಾಕ್ಸರ್, ಈಗಾಗಲೇ ಹಲವಾರು ಬಾಕ್ಸಿಂಗ್ ಚಾಂಪಿಯನ್ ಷಿಪ್ ಗೆದ್ದಿದ್ದಾರೆ.