Sunday, August 23, 2026

BDA Apartments

Home Front Page ಟೆಸ್ಟ್ ಕ್ರಿಕೆಟ್: ನ್ಯೂಜಿಲ್ಯಾಂಡ್ ವಿರುದ್ಧ ಸಂಕಷ್ಟದಲ್ಲಿ ಟೀಂ ಇಂಡಿಯಾ

ಟೆಸ್ಟ್ ಕ್ರಿಕೆಟ್: ನ್ಯೂಜಿಲ್ಯಾಂಡ್ ವಿರುದ್ಧ ಸಂಕಷ್ಟದಲ್ಲಿ ಟೀಂ ಇಂಡಿಯಾ

ವೆಲ್ಲಿಂಗ್ಟನ್, ಫೆಬ್ರವರಿ 22, 2020 (www.justkannada.in): ಭಾರತ ಕ್ರಿಕೆಟ್ ತಂಡ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 165 ರನ್ಗಳಿಗೆ ಆಲೌಟ್ ಆಗಿದೆ.

ಟಿಮ್ ಸೌಥಿ ಮತ್ತು ಕೈಲ್ ಜೆಮೀಸನ್ ಮಾರಕ ದಾಳಿಗೆ ತತ್ತರಿಸಿರುವ ಟೀಂ ಇಂಡಿಯಾ ಕೇವಲ 165 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಭಾರತದ ಪರ ಏಕಾಂಗಿ ಹೋರಾಟ ನಡೆಸಿದ ಅಜಿಂಕ್ಯ ರಹಾನೆ (46) ಗರಿಷ್ಠ ಸ್ಕೋರರ್ ಎನಿಸಿದರು. 20 ಎಸೆತಗಳಲ್ಲಿ 21 ರನ್ ಸಿಡಿಸಿದ ಮುಹಮ್ಮದ್ ಶಮಿ ಕೊನೆಯವರಾಗಿ ಔಟ್ ಆದರು.

ಪ್ರತಿದಾಳಿ ನಡೆಸಿದ ಭಾರತೀಯ ಬೌಲರ್ಗಳು ನ್ಯೂಝಿಲೆಂಡ್ ತಂಡದ ಆರಂಭಿಕ ಆಟಗಾರ ಟಾಮ್ ಲ್ಯಾಥಮ್ (11) ಅವರನ್ನು ಬೇಗನೇ ಪೆವಿಲಿಯನ್ಗೆ ಕಳುಹಿಸಿದರುಅತಿಥೇಯರಿಗೆ ಮತ್ತೊಂದು ಆಘಾತ ನೀಡಿದ ಇಶಾಂತ್ ಶರ್ಮಾ ಟಾಮ್ ಬ್ಲಂಡಲ್ (30) ಅವರ ವಿಕೆಟ್ ಕಬಳಿಸಿದರುಇತ್ತೀಚಿನ ವರದಿಗಳು ಬಂದಾಗ ನ್ಯೂಝಿಲೆಂಡ್ ತಂಡ 2 ವಿಕೆಟ್ ನಷ್ಟಕ್ಕ 148 ರನ್ ಗಳಿಸಿ ಸುಸ್ಥಿತಿಯಲ್ಲಿದೆ.