ದೇಶದ್ರೋಹಿ  ಹೇಳಿಕೆ ನೀಡುವವರಿಗೆ ಕ್ರೂರ ಶಿಕ್ಷೆಯಾಗಲಿ: ಗಡಿಪಾರು ಮಾಡಲಿ- ಮಾಜಿ ಸಿಎಂ ಸಿದ್ದರಾಮಯ್ಯ…

ಬೆಂಗಳೂರು,ಫೆ,21.2020(www.justkannada.in):  ಪಾಕಿಸ್ತಾನ ಪರ ಅಮೂಲ್ಯ ಮತ್ತು ಆರ್ದಾ ಘೋಷಣೆ ವಿಚಾರ ಸಂಬಂಧ ದೇಶದ್ರೋಹಿ ಹೇಳಿಕೆ ನೀಡುವವರಿಗೆ ಕ್ರೋರ ಶಿಕ್ಷೆಯಾಗಲಿ ಅವರನ್ನ ಗಡಿಪಾರು ಮಾಡಲಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹಿಸಿದರು.

ಈ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಇಂತವರು ದೇಶದಲ್ಲೇ ಇರಬಾರದು. ದೇಶದಲ್ಲಿರಬೇಕಂದ್ರೆ ದೇಶಭಕ್ತರಾಗಿರಬೇಕು. ದೇಶದ್ರೋಹವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.  ಯಾರೇ ದೇಶದ್ರೋಹಿ ಹೇಳಿಕೆ ಕೊಡಲಿ ಅವರನ್ನ ಗಡಿಪಾರು ಮಾಡಲಿ. ದೇಶದ್ರೋಹಿ ಹೇಳಿಕೆ ನೀಡುವವರಿಗೆ  ಕ್ರೂರ ಶಿಕ್ಷೆಯಾಗಲಿ ಎಂದು ಹೇಳಿದರು.

ದೇಶದ ವಿಚಾರದಲ್ಲಿ ಒಗ್ಗಟ್ಟು ಇರಬೇಕು  ಒಗ್ಗಟ್ಟು ಒಡೆಯುವ ಕೆಲಸ ಮಾಡಬಾರದು.  ದೇಶದ್ರೋಹಿ ಹೇಳಿಕೆ ನೀಡಿದವರ ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ. ಇದರ ಹಿಂದೆ ಯಾವುದಾದರೂ ಸಂಘಟನೆ ಇದೆಯಾ.  ಈ ಬಗ್ಗೆ ಗೃಹ ಸಚಿವರು ಪತ್ತೆ ಹಚ್ಚಲಿ ಎಂದು ಸಿದ್ಧರಾಮಯ್ಯ ತಿಳಿಸಿದರು.

Key words: traitor- claim –cruel- punishment- Former CM- Siddaramaiah