Thursday, August 13, 2026

BDA Apartments

Home Front Page ಮೈತ್ರಿ ಒಳಗಿನ ಸಮಸ್ಯೆಯನ್ನ ಮಾಧ್ಯಮಗಳ ಮುಂದೆ ಹೇಳಲ್ಲ- ಪರಾಜಿತ ಅಭ್ಯರ್ಥಿ ಸಿ.ಎಚ್ ವಿಜಯ್ ಶಂಕರ್..

ಮೈತ್ರಿ ಒಳಗಿನ ಸಮಸ್ಯೆಯನ್ನ ಮಾಧ್ಯಮಗಳ ಮುಂದೆ ಹೇಳಲ್ಲ- ಪರಾಜಿತ ಅಭ್ಯರ್ಥಿ ಸಿ.ಎಚ್ ವಿಜಯ್ ಶಂಕರ್..

ಮೈಸೂರು,ಮೇ,25,2019(): ಮೈತ್ರಿ ಒಳಗಿನ ಸಮಸ್ಯೆಗಳನ್ನ ಮಾಧ್ಯಮದ ಮುಂದೆ ಹೇಳಲ್ಲ. ಮನಸ್ತಾಪಗಳನ್ನ ಬಹಿರಂಗವಾಗಿ ಹೇಳಲ್ಲ. ನನ್ನ ಹೇಳಿಕೆಗಳು ಮೈತ್ರಿಗೆ ಅನುಕೂಲವಾಗಬೇಕು ಎಂದು ಮೈಸೂರು -ಕೊಡಗು ಪರಾಜಿತ ಅಭ್ಯರ್ಥಿ ಸಿ.ಎಚ್ ವಿಜಯ್ ಶಂಕರ್ ನುಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿ.ಎಚ್ ವಿಜಯ್ ಶಂಕರ್, ಮೈತ್ರಿ ಒಳಗಿನ ಸಮಸ್ಯೆಗಳನ್ನ ಬಹಿರಂಗವಾಗಿ ಹೇಳಲ್ಲ. ಲಾಭ ತರುವ ವಿಚಾರವಿದ್ದರೇ ಬಹಿರಂಗವಾಗಿ ಹೇಳುವೆ. ನಾನು ಹೇಳುವುದನ್ನೆಲ್ಲಾ ನನ್ನ ನಾಯಕರಿಗೆ ವರದಿ ತಯಾರು ಮಾಡಿ ಹೆಳುತ್ತೇನೆ ಎಂದು ಹೇಳಿದರು.

ಮೈತ್ರಿಯಲ್ಲಿ ವ್ಯತ್ಯಾಸವಾಗಿದೆ. ಮಾನಸಿಕವಾಗಿ ನಾವು ಒಂದಾಗಿಲ್ಲ. ನಾಯಕನ ಗುಣ ನುಡಿದಂತೆ ನಡೆಯುವುದು. ಇಲ್ಲಿ ನಂಬಿಕೆಯ ಕೊರತೆ ಕಾಣುತ್ತಿದೆ. ಅಪನಂಬಿಕೆಯಿಂದ ನಷ್ಟವಾಗಿದ. ಈಗ ಅಪನಂಬಿಯನ್ನ ಸರಿಪಡಿಸಿಕೊಳ್ಳಬೇಕು ಸರಿಪಡಿಸಿಕೊಳ್ಳದಿದ್ದರೇ ಸಮ್ಮಿಶ್ರ ಸರ್ಕಾರಕ್ಕೆ ಕಷ್ಟ ಎಂದು ನುಡಿದರು.

#mysore #vijayshankar #alliancegovernment