Sunday, September 20, 2026

BDA Apartments

ಪತ್ನಿ ಹತ್ಯೆಗೈದು ಪುತ್ರಿ ಮೇಲೆ ಹಲ್ಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ...
Home Crime ಪತ್ನಿ ಹತ್ಯೆಗೈದು ಪುತ್ರಿ ಮೇಲೆ ಹಲ್ಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ…

ಪತ್ನಿ ಹತ್ಯೆಗೈದು ಪುತ್ರಿ ಮೇಲೆ ಹಲ್ಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ…

ಬೆಂಗಳೂರು,ಫೆ,11,2020(www.justkannada.in):  ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ ಹತ್ಯೆಗೈದು ಪುತ್ರಿ ಮೇಲೆ ಹಲ್ಲೆ ಮಾಡಿ ನಂತರ ತಾನೂ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಶಿವರಾಜ್ ಎಂಬಾತನೇ ತನ್ನ ಪತ್ನಿ ಪತ್ನಿ ಹತ್ಯೆಗೈದು  ಪುತ್ರಿ ಚೈತ್ರ ಮೇಲೆ ಹಲ್ಲೆ ನಡೆಸಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.  ಮನೆಯಲ್ಲಿ ಪತ್ನಿ ಲಕ್ಷ್ಮಿ ಕಪಾಳಕ್ಕೆ ಹೊಡೆದು ಹತ್ಯೆಗೈದ ಶಿವರಾಜ್  ಈ ವೇಳೆ ಅಡ್ಡಬಂದ ಪುತ್ರಿ ಚೈತ್ರ  ಮೇಲೆ ಹಲ್ಲೆ ಮಾಡಿದ್ದಾನೆ.  ನಂತರ ತಾನೂ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಅಸ್ವಸ್ಥರಾದ ಚೈತ್ರ ಮತ್ತು  ಶಿವರಾಜ್ ಇಬ್ಬರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ರಾಜಗೋಪಾಲನಗರ ಠಾಣಾ ಪೊಲೀಸರು ಭೇಟಿ ಆಗಮಿಸಿ ಪರಿಶಿಲೀಸಿದ್ದಾರೆ.

Key words: Bangalore-man – killed – wife – assaulted- his daughter