Sunday, October 11, 2026

Dasara Wishes

Just Kannada DasraWishes_JK DasraWishes JK
Happy Dasara
Home Cinema ಸ್ಟಾರ್ ಸುವರ್ಣ ವಾಹಿನಿಗೆ ವಜ್ರೇಶ್ವರಿ ಕಂಬೈನ್ಸ್‌’ನಿಂದ ‘ಜೀವ ಹೂವಾಗಿದೆ’ ಕೊಡುಗೆ

ಸ್ಟಾರ್ ಸುವರ್ಣ ವಾಹಿನಿಗೆ ವಜ್ರೇಶ್ವರಿ ಕಂಬೈನ್ಸ್‌’ನಿಂದ ‘ಜೀವ ಹೂವಾಗಿದೆ’ ಕೊಡುಗೆ

ಬೆಂಗಳೂರು, ಫೆಬ್ರವರಿ 03, 2020 (www.justkannada.in): ವಜ್ರೇಶ್ವರಿ ಕಂಬೈನ್ಸ್‌ನ ‘ಪೂರ್ಣಿಮ ಎಂಟರ್‌ಪ್ರೈಸಸ್‌’ನವರು ಸ್ಟಾರ್‌ ಸುವರ್ಣ ವಾಹಿನಿಗೆ ನಿರ್ಮಾಣ ಮಾಡುತ್ತಿರುವ ಎರಡನೇಯ ಧಾರಾವಾಹಿ ಇಂದಿನಿಂದ ಪ್ರಸಾರವಾಗಲಿದೆ.

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಫೆಬ್ರುವರಿ 3ರಿಂದ ಹೊಸದೊಂದು ಧಾರಾವಾಹಿ ಆರಂಭವಾಗುತ್ತಿದೆ. ಇದರ ಶೀರ್ಷಿಕೆ ‘ಜೀವ ಹೂವಾಗಿದೆ’.

‘ಜೀವ ಹೂವಾಗಿದೆ ಎನ್ನುವ ಶೀರ್ಷಿಕೆ ನನಗೆ ಬಹಳ ಇಷ್ಟ. ಆದರೆ, ಜೀವವನ್ನು ಹೂವಾಗಿ ಮಾಡುವುದು ಬಹಳ ಕಷ್ಟ’ ಎಂದು ಹೇಳುತ್ತಾರೆ ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್‌. ವಾಹಿನಿಯವರು ಆಯೋಜಿಸಿದ್ದ ಧಾರಾವಾಹಿಯ ಪ್ರೀಮಿಯರ್‌ ‍ಪ್ರದರ್ಶನಕ್ಕೆ ರಾಘಣ್ಣ ಬಂದಿದ್ದರು. ಈ ಕುರಿತು ಮಾತನಾಡಿದರು.