Saturday, August 15, 2026

BDA Apartments

Home Front Page ಎಲ್ಲೆಲ್ಲಿ ಅಧಿಕಾರ ಸಿಗುತ್ತೆ ಅಲ್ಲೆಲ್ಲಾ ಹೋಗುವವರು ನಾವಲ್ಲ-ಮಾಜಿ ಸಚಿವ ಎಂಟಿಬಿ ನಾಗರಾಜ್…

ಎಲ್ಲೆಲ್ಲಿ ಅಧಿಕಾರ ಸಿಗುತ್ತೆ ಅಲ್ಲೆಲ್ಲಾ ಹೋಗುವವರು ನಾವಲ್ಲ-ಮಾಜಿ ಸಚಿವ ಎಂಟಿಬಿ ನಾಗರಾಜ್…

ಬೆಂಗಳೂರು,ಜ,31,2020(www.justkannada.in): ಅಧಿಕಾರದ ಆಸೆಗಾಗಿ ನಾವು ರಾಜಕೀಯಕ್ಕೆ ಬಂದಿಲ್ಲ ಎಲ್ಲೆಲ್ಲಿ ಅಧಿಕಾರ ಸಿಗುತ್ತೆ ಅಲ್ಲೆಲ್ಲಾ  ಹೋಗವವರು ನಾವಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಎಂಟಿಬಿ ನಾಗರಾಜ್, ಅಧಿಕಾರದ ಆಸೆಗಾಗಿ ನಾವು ರಾಜಕೀಯಕ್ಕೆ ಬಂದಿಲ್ಲ ಎಲ್ಲೆಲ್ಲಿ ಅಧಿಕಾರ ಸಿಗುತ್ತೆ ಅಲ್ಲೆಲ್ಲಾ  ಹೋಗವವರು ನಾವಲ್ಲ.  ಸಿಎಂ ಬಿಎಸ್ ವೈ ಕೊಟ್ಟ ಮಾತಿನಂತೆ 11 ಮಂದಿಯನ್ನ ಸಚಿವರನ್ನಾಗಿ ಮಾಡಲಿ. ಮಂತ್ರಿಗಿರಿ ಸಿಗುವ ಬಗ್ಗೆ ಭರವಸೆ ಇದೆ ಅಂದುಕೊಂಡಿಲ್ಲ ಎಂದು ತಿಳಿಸಿದರು.

ಹಾಗೆಯೇ  ನಮ್ಮ ನಡುವೆ ಒಗ್ಗಟ್ಟಿದೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸೋತವರಿಗೆ ಮಂತ್ರಿಗಿರಿ ಕೊಡದು ಬಿಡೋದು ಅವರಿಗೆ ಬಿಟ್ಟಿದ್ದು ಎಂದು ಎಂಟಿಬಿ ನಾಗರಾಜ್ ಹೇಳಿದರು.

Key words: Former minister- MTB Nagaraj –cabinet expension