ಸಿಎಂ ಬಿಎಸ್ ವೈ ದೆಹಲಿಗೆ ತೆರಳಿರುವ ಹಿನ್ನೆಲೆ: ಸಚಿವ ಸಂಪುಟ ಸಭೆ ಮುಂದೂಡಿಕೆ…

kannada t-shirts

ಬೆಂಗಳೂರು,ಜ,31,2020(www.justkannada.in):  ಕಗ್ಗಂಟಾಗಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬ ಇದೀಗ ರಾಜ್ಯದ ಅಭಿವೃದ್ದಿಗೂ ತೊಡಕಾಗಿ ಪರಿಣಮಿಸಿದೆ.

ಸಚಿವ ಸಂಪುಟ ವಿಸ್ತರಣೆ ಸಂಬಂಧ ಅಮಿತ್ ಶಾ ಅವರ ಜತೆ ಚರ್ಚಿಸಲು ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳಿರುವ ಹಿನ್ನೆಲೆ ಇಂದು ಸಂಜೆ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ಮುಂದೂರಿಕೆಯಾಗಿದೆ.  ಕಳೆದ ವಾರವೂ ಸಹ ಸಚಿವ ಸಂಪುಟ ವಿಸ್ತರಣೆ ನಡೆದಿರಲಿಲ್ಲ.

ಕಳೆದ ವಾರ ಸಿಎಂ ಬಿಎಸ್ ಯಡಿಯೂರಪ್ಪ ದಾವೋಸ್ ಗೆ ಹೋಗಿದ್ದ ಹಿನ್ನೆಲೆ ಸಂಪುಟ ಸಭೆ ನಡೆದಿರಲಿಲ್ಲ. ಕಳೆದ ಎರಡು ವಾರಗಳಿಂದ ಸಂಪುಟ ಸಭೆ ನಡೆಯದ ಹಿನ್ನೆಲೆ ಹಲವು ಅಭಿವೃದ್ದಿ ಕಾಮಗಾರಿಗೆ ಒಪ್ಪಿಗೆ ಸಿಗದೆ ತೊಡಕು ಉಂಟಾಗಿದೆ. ಈ ಮೂಲಕ ಸಚಿವ ಸಂಪುಟ ವಿಸ್ತರಣೆ ವಿಳಂಬ  ರಾಜ್ಯದ ಅಭಿವೃದ್ದಿಗೂ ತೊಡಕನ್ನುಂಟು ಮಾಡಿದೆ.

Key words: CM BS Yeddyurappa – Delhi-Adjournment – Cabinet meeting

website developers in mysore