Tuesday, September 29, 2026

BDA Apartments

ಅಪ್ಪು ಅಭಿಮಾನಿಗಳೇ ತಯಾರಿಸಿದ್ದಾರೆ ಪುನೀತ್ ಕುರಿತ ಕಿರುಚಿತ್ರ ‘ಅಜಾತಶತ್ರ...
Home Cinema ಅಪ್ಪು ಅಭಿಮಾನಿಗಳೇ ತಯಾರಿಸಿದ್ದಾರೆ ಪುನೀತ್ ಕುರಿತ ಕಿರುಚಿತ್ರ ‘ಅಜಾತಶತ್ರು’

ಅಪ್ಪು ಅಭಿಮಾನಿಗಳೇ ತಯಾರಿಸಿದ್ದಾರೆ ಪುನೀತ್ ಕುರಿತ ಕಿರುಚಿತ್ರ ‘ಅಜಾತಶತ್ರು’

ಬೆಂಗಳೂರು, ಜನವರಿ 25, 2019 (www.justkannada.in): ಅಪ್ಪು ಅಭಿಮಾನಿಗಳಿಂದ, ಅಪ್ಪು ಅಭಿಮಾನಿಗಳಿಗಾಗಿ, ಅಪ್ಪು ಅಭಿಮಾನಿಗಳಿಗೋಸ್ಕರ ‘ಅಜಾತಶತ್ರು’ ಎಂಬ ಕಿರುಚಿತ್ರ ನಿರ್ಮಿಸಲಾಗಿದೆ.

ಹೌದು. ಪುನೀತ್ ರಾಜ್ ಕುಮಾರ್ ಜೀವನ ಮತ್ತು ಅವರು ಮಾಡಿರುವ ಉತ್ತಮ ಕಾರ್ಯಗಳ ಕುರಿತಾದ ಶಾರ್ಟ್ ಫಿಲ್ಮ್ ಮಾಡಲಾಗಿದೆ. ಆರು ತಿಂಗಳ ಪುಟ್ಟ ಕಂದಮ್ಮ ಆಗಿದ್ದಾಗಲೇ, ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿದ್ದ ಪುನೀತ್ ರಾಜ್ ಕುಮಾರ್ ಬಾಲನಟನಾಗಿ, ಯಶಸ್ವಿ ಕನ್ನಡ ನಟನಾಗಿ, ಉತ್ತಮ ಗಾಯಕನಾಗಿ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ್ದಾರೆ.

ಇಂತಹ ನಟ ಪುನೀತ್ ರಾಜ್ ಕುಮಾರ್ ಗೆ ಟ್ರಿಬ್ಯೂಟ್ ನೀಡುವ ಸಲುವಾಗಿ ಅಭಿಮಾನಿಗಳು ಅಪ್ಪು ಬಗ್ಗೆ ‘ಅಜಾತಶತ್ರು’ ಎಂಬ ಕಿರುಚಿತ್ರ ಸಿದ್ಧ ಪಡಿಸಿದ್ದಾರೆ. ಮಾರ್ಚ್ 17 ರಂದು ಪುನೀತ್ ರಾಜ್ ಕುಮಾರ್ ಜನ್ಮದಿನ. ಅಂದು ಈ ‘ಅಜಾತಶತ್ರು’ ಕಿರುಚಿತ್ರ ರಿಲೀಸ್ ಆಗಲಿದೆ.