Sunday, September 20, 2026

BDA Apartments

ಮುಸ್ಲೀಂ ಸಮುದಾಯದ ವಿರುದ್ದ ಹೇಳಿಕೆ ನೀಡುವಾಗ ಎಚ್ಚರಿಕೆ- ಆಡಳಿತ ಪಕ್ಷದ ನಾಯಕ...
Home Front Page ಮುಸ್ಲೀಂ ಸಮುದಾಯದ ವಿರುದ್ದ ಹೇಳಿಕೆ ನೀಡುವಾಗ ಎಚ್ಚರಿಕೆ- ಆಡಳಿತ ಪಕ್ಷದ ನಾಯಕರಿಗೆ ಸಿಎಂ ಬಿಎಸ್ ವೈ...

ಮುಸ್ಲೀಂ ಸಮುದಾಯದ ವಿರುದ್ದ ಹೇಳಿಕೆ ನೀಡುವಾಗ ಎಚ್ಚರಿಕೆ- ಆಡಳಿತ ಪಕ್ಷದ ನಾಯಕರಿಗೆ ಸಿಎಂ ಬಿಎಸ್ ವೈ ಸೂಚನೆ…

ಬೆಂಗಳೂರು,ಜ,25,2020(www.justkannada.in):  ಸಿಎಎ ವಿಚಾರವಾಗಿ ಹಾಗೂ ಮುಸ್ಲೀಂ ಸಮುದಾಯದ ವಿರುದ್ದ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಿ ಎಂದು ಆಡಳಿತ ಪಕ್ಷದ ನಾಯಕರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಸಿಎಎ ವಿಚಾರವಾಗಿ ಹಾಗೂ ಮುಸ್ಲೀಂ ಸಮುದಾಯದ ವಿರುದ್ದ ಶಾಸಕ ರೇಣುಕಾಚಾರ್ಯ ಹಾಗೂ ಇತರೇ ನಾಯಕರು ನೀಡಿದ ಹೇಳಿಕೆ ವಿವಾದಕ್ಕೀಡಾಗಿತ್ತು. ವೋಟ್ ಹಾಕೋದು ಬೇರೆಯವರಿಗೆ ಸವಲತ್ತು ನೀಡುಲು ನಾವ್ ಬೇಕಾ. ಮುಸ್ಲೀಂರಿಗೆ ಯಾವುದೇ ಸವಲತ್ತು ನೀಡಲ್ಲ ಎಂದು ರೇಣುಕಾಚಾರ್ಯ ಹೇಳಿಕೆ ನೀಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದಿರಲು ಸಿಎಂ ಬಿಎಸ್ ವೈ ಆಡಳಿತ ಪಕ್ಷದ ನಾಯಕರಿಗೆ ತಿಳಿಸಿದ್ದಾರೆ.

ಸಿಎಎ ವಿಚಾರದಲ್ಲಿ ನಾವು ರಾಷ್ಟ್ರಮಟ್ಟದಲ್ಲಿ ಹೋಗಬೇಕು. ಅದ್ದರಿಂದ ವಿವಾದಸ್ಪದ ಹೇಳಿಕೆ ನೀಡಿ ಸಮಸ್ಯೆ ಮಾಡಬೇಡಿ. ಮುಸ್ಲೀಂ ಸಮುದಾಯವ ವಿರುದ್ದ ಹೇಳಿಕೆ ನೀಡುವಾಗ ಎಚ್ಚರಿಕೆ ಇರಲಿ. ಆಕ್ರೋಶ ಭರಿತ ಹೇಳಿಕೆ ನೀಡುವ ಗೋಜಿಗೆ ಹೋಗಬೇಡಿ ಎಂದು ಸಿಎಂ ಬಿಎಸ್ ವೈ ಸಲಹೆ ನೀಡಿದ್ದಾರೆ.

Key words: Warning – statement -against -Muslim community-  CM BS Yeddyurappa- – ruling party- leaders.