Wednesday, September 30, 2026

BDA Apartments

Mysore Dasara Festival BDA JK_Adv BDA Adv
Home Front Page ನ್ಯೂಜಿಲ್ಯಾಂಡ್ ಕ್ರೀಡೆಗೆ ರಾಯಬಾರಿ ಎಂಬ ಕೊಯ್ಲಿ ಹೇಳಿಕೆಗೆ ಎಲ್ಲೆಡೆ ಪ್ರಶಂಸೆ

ನ್ಯೂಜಿಲ್ಯಾಂಡ್ ಕ್ರೀಡೆಗೆ ರಾಯಬಾರಿ ಎಂಬ ಕೊಯ್ಲಿ ಹೇಳಿಕೆಗೆ ಎಲ್ಲೆಡೆ ಪ್ರಶಂಸೆ

ಆಕ್ಲೆಂಡ್, ಜನವರಿ 2, 2019 (www.justkannada.in): ನ್ಯೂಜಿಲ್ಯಾಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಯೋಚಿಸಿದರೂ ನಿಮಗೆ ಆ ರೀತಿ ಮಾಡಲು ಸಾಧ್ಯವಿಲ್ಲ. ಅವರು ಕ್ರೀಡೆಗೆ ರಾಯಬಾರಿಗಳು ಎಂದು ಹೇಳಿದ ಕೊಯ್ಲಿ ಹೇಳಿಕೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ನಾವು ಕಿವೀಸ್ ತಂಡವನ್ನು ಎದುರಿಸಲು ಉತ್ತಮ ತಯಾರಿ ನಡೆಸಿದ್ದೇವೆ ಮತ್ತು ನಮ್ಮಲ್ಲಿ ಸ್ಪರ್ಧೆ ಇರುವುದು ಕ್ರೀಡಾಂಗಣದಲ್ಲಿ ಅಷ್ಟೆ. ನಾನು ಇಂಗ್ಲೆಂಡ್‌ನಲ್ಲಿ ಇದನ್ನೇ ಹೇಳಿದ್ದೆ. ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನ್ಯೂಝಿಲ್ಯಾಂಡ್ ಉತ್ತಮ ತಂಡವಾಗಿದೆ ಎಂದು ಕೊಯ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಕೇನ್ ವಿಲಿಯಮ್ಸನ್ ನೇತೃತ್ವದ ತಂಡದ ಸೌಹಾರ್ದಯುತ ವರ್ತನೆಯನ್ನು ಶ್ಲಾಘಿಸಿದ ಕೊಹ್ಲಿ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡ ಕ್ರೀಡೆಗೆ ಉತ್ತಮ ರಾಯಭಾರಿಗಳು ಎಂದು ಹೇಳಿದರು. ಎಲ್ಲೆಡೆ ಮೆಚ್ಚುಗೆಗೆ ಕಾರಣವಾಗಿದೆ.