Sunday, September 20, 2026

BDA Apartments

Home Front Page ನಿನ್ನೆ ಸ್ಪೋಟವಾಗಿರುವ ವಸ್ತು ಪಟಾಕಿ ರೀತಿ ಇರಲಿಲ್ಲ-ಡಿಸ್ಚಾರ್ಜ್ ಬಳಿಕ ಶಾಸಕ ಹ್ಯಾರೀಸ್ ಹೇಳಿಕೆ…

ನಿನ್ನೆ ಸ್ಪೋಟವಾಗಿರುವ ವಸ್ತು ಪಟಾಕಿ ರೀತಿ ಇರಲಿಲ್ಲ-ಡಿಸ್ಚಾರ್ಜ್ ಬಳಿಕ ಶಾಸಕ ಹ್ಯಾರೀಸ್ ಹೇಳಿಕೆ…

ಬೆಂಗಳೂರು,ಜ,23,2020(www.justkannada.in): ವನ್ನಾರಪೇಟೆಯಲ್ಲಿ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ  ಅನುಮಾನಸ್ಪದ ಸ್ಪೋಟದಿಂದಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಶಾಂತಿನಗರ ಕಾಂಗ್ರೆಸ್ ಶಾಸಕ ಹ್ಯಾರೀಸ್ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ವನಾರ್ ಪೇಟೆ ದೇವರ ಕಾರ್ಯಕ್ರಮದಲ್ಲಿ ಶಾಸಕ ಹ್ಯಾರಿಸ್ ಭಾಗಿಯಾಗಿದ್ದರು. ಈ ವೇಳೆ  ಅನುಮಾನಸ್ಪದ ಸ್ಫೋಟ ಸಂಭವಿಸಿ ಶಾಸಕ ಹ್ಯಾರೀಸ್ ಕಾಲಿಗೆ ಗಾಯವಾಗಿತ್ತು. ಕೂಡಲೇ ಅವರನ್ನ ಸೆಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಾತನಾಡಿದ ಶಾಸಕ ಹ್ಯಾರೀಸ್, ನಾನು ಈಗ ಆರೋಗ್ಯವಾಗಿದ್ದೇನೆ.  ನಿನ್ನೆ ನಿನ್ನೆ ಸ್ಪೋಟವಾಗಿರುವ ವಸ್ತು ಪಟಾಕಿ ರೀತಿ ಇರಲಿಲ್ಲ. ನಾನು ದೀಪಾವಳಿಯಲ್ಲಿ ಪಟಾಕಿ ಹೊಡೆಯುತ್ತೇವೆ. ಪಟಾಕಿ ಹೇಗಿರುತ್ತೆ ಅಂತಾಗೊತ್ತು. ಆದರೆ ನಿನ್ನೆ ಸ್ಪೋಟವಾದ ವಸ್ತು ಪಟಾಕಿ ರೀತಿ ಇರಲಿಲ್ಲ. ರೌಂಡ್ ಬಾಲ್ ರೀತಿ ಇತ್ತು ಎಂದು ತಿಳಿಸಿದರು.

ಹಾಗೆಯೇ ನನಗೆ ಯಾರೂ ರಾಜಕೀಯದಲ್ಲಿ ವೈಯಕ್ತಿಕವಾಗಿ ಶತ್ರುಗಳಿಲ್ಲ. ಯಾರ ಮೇಲೂ ಅನುಮಾನವಿಲ್ಲ. ಎಲ್ಲರೂ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಗೃಹಸಚಿವರು ಸಹ ಕರೆ ಮಾಡಿ ಸೂಕ್ತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಸೂಕ್ತ ತನಿಖೆ ನಡೆಸುವ ವಿಶ್ವಾಸವಿದೆ ಎಂದು ಹ್ಯಾರೀಸ್ ತಿಳಿಸಿದರು.

Key words: object –exploded- -not look –fireworks-MLA -Harris -discharge.