Saturday, August 22, 2026

BDA Apartments

Home Cinema ರಾಕಿ ಭಾಯ್ ಹುಟ್ಟುಹಬ್ಬಕ್ಕೆ ಐದು ಸಾವಿರ ತೂಕದ ಕೇಕ್ ರೆಡಿ ಮಾಡುತ್ತಿರುವ ಅಭಿಮಾನಿ

ರಾಕಿ ಭಾಯ್ ಹುಟ್ಟುಹಬ್ಬಕ್ಕೆ ಐದು ಸಾವಿರ ತೂಕದ ಕೇಕ್ ರೆಡಿ ಮಾಡುತ್ತಿರುವ ಅಭಿಮಾನಿ

ಬೆಂಗಳೂರು, ಜನವರಿ 02, 2019 (www.justkannada.in): ರಾಕಿಂಗ್​ ಸ್ಟಾರ್​ ಯಶ್​ ಹುಟ್ಟು ಹಬ್ಬಕ್ಕೆ ಅಭಿಮಾನಿಯೊಬ್ಬ 5 ಸಾವಿರ ಕೆ.ಜಿ ಕೇಕ್​ ಸಿದ್ಧಪಡಿಸುತ್ತಿದ್ದಾನೆ.

ಜನವರಿ 8 ರಂದು ರಾಕಿಂಗ್​ ಸ್ಟಾರ್​ 34ನೇ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ. ವೇಣು ಗೌಡ ಎಂಬಾತ ತನ್ನ ನೆಚ್ಚಿನ ನಟ ಯಶ್​ ಹುಟ್ಟು ಹಬ್ಬದ ಆಚರಣೆಗೆ ಈಗಲೇ ಸಿದ್ಧನಾಗಿದ್ದಾನೆ.

ಇದಕ್ಕಾಗಿ ಬರೋಬ್ಬರಿ 5 ಸಾವಿರ ಕೆ.ಜಿಯ ಕೇಕ್​ ಸಿದ್ಧಪಡಿಸಲಾಗುತ್ತಿದೆ. ಯಶ್​ ಕೈಯಾರೆ ಈ ಕೇಕ್​ ಕಟ್​ ಮಾಡಿಸುವ ಪ್ಲಾನ್​ ಹಾಕಿಕೊಂಡಿದ್ದಾರೆ. ಇದಕ್ಕೆಂದೇ ಪೋಸ್ಟರ್​ವೊಂದನ್ನು ಸಿದ್ಧಪಡಿಸಲಾಗಿದೆ.

ನಂದಿ ಲಿಂಕ್​​ ಗ್ರೌಂಡ್​, ಪಂಟರಪಾಳ್ಯ, ನಂದಿ ಹಿಲ್ಸ್​ , ಬೆಂಗಳೂರು ಇಲ್ಲಿ ಹುಟ್ಟು ಹಬ್ಬ ಆಚರಣೆ ನಡೆಯಲಿದೆ ಎಂದು ಆ ಪೋಸ್ಟರ್ ನಲ್ಲಿ ತಿಳಿಸಲಾಗಿದೆ.