2020ರಲ್ಲಿ ‘ರಿಯಲ್ ಸ್ಟಾರ್’ ಫುಲ್ ಟೈಮ್ ಸಿನಿಮಾದಲ್ಲಿ ಬ್ಯುಸಿ !

ಬೆಂಗಳೂರು, ಜನವರಿ 02, 2019 (www.justkannada.in): ಈ ವರ್ಷ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿರುವ ಸೂಚನೆ ನೀಡಿದ್ದಾರೆ.

ಈಗಾಗಲೇ ಕಬ್ಜ ಸಿನಿಮಾ ಶುರು ಮಾಡಿಕೊಂಡಿರುವ ಉಪೇಂದ್ರರ ಮತ್ತೊಂದು ಸಿನಿಮಾ ಸಂಕ್ರಾಂತಿಗೆ ಘೋಷಣೆಯಾಗಲಿದೆ. ಅಂದಹಾಗೆ ಆರ್ ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಮುಹೂರ್ತ ಡಿಸೆಂಬರ್ ನಲ್ಲಿ ನೆರವೇರಿತ್ತು.

ಈ ವರ್ಷದ ಆರಂಭ ಅಂದರೆ ಇದೇ ತಿಂಗಳ ಮೊದಲ ವಾರ ಚಿತ್ರೀಕರಣ ಆರಂಭಿಸುವುದಾಗಿ ಚಿತ್ರತಂಡ ಘೋಷಿಸಿತ್ತು. ಇದೀಗ ಮತ್ತೊಂದು ಸಿನಿಮಾ ಘೋಷಣೆ ಮಾಡಲಿದ್ದಾರೆ ರಿಯಲ್ ಸ್ಟಾರ್.

ಶಶಾಂಕ್ ನಿರ್ದೇಶನದಲ್ಲಿ ಉಪೇಂದ್ರ ನಾಯಕರಾಗಲಿರುವ ಹೊಸ ಸಿನಿಮಾದ ಟೈಟಲ್ ಸಂಕ್ರಾಂತಿಗೆ ಘೋಷಣೆಯಾಗಲಿದೆ.