Sunday, September 13, 2026

BDA Apartments

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ ಅಗ್ರಸ್ಥಾನ: 2019ಕ್ಕೆ ಕೊಹ್ಲಿ ಹ್ಯಾಪಿ ಎಂಡಿಂಗ...
Home Front Page ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ ಅಗ್ರಸ್ಥಾನ: 2019ಕ್ಕೆ ಕೊಹ್ಲಿ ಹ್ಯಾಪಿ ಎಂಡಿಂಗ್ !

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ ಅಗ್ರಸ್ಥಾನ: 2019ಕ್ಕೆ ಕೊಹ್ಲಿ ಹ್ಯಾಪಿ ಎಂಡಿಂಗ್ !

ದುಬೈ, ಡಿಸೆಂಬರ್ 31, 2019 (www.justkannada.in): ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ 2019ರ ವರ್ಷವನ್ನು ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನ ಅಗ್ರಸ್ಥಾನದೊಂದಿಗೆ ಕೊನೆಗೊಳಿಸಿದ್ದಾರೆ.

ಸೋಮವಾರ ಪ್ರಕಟವಾದ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಕೆಳಗಿಳಿದಿರುವ ಚೇತೇಶ್ವರ ಪೂಜಾರ ಐದನೇ ಸ್ಥಾನಕ್ಕೆ ತಲುಪಿದ್ದಾರೆ.

ಕೊಹ್ಲಿ ಬಳಿ 928 ಪಾಯಿಂಟ್ಸ್‌ ಗಳಿದ್ದರೆ, 911 ಪಾಯಿಂಟ್ಸ್‌ ಹೊಂದಿರುವ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ 2ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಕೇನ್‌ ವಿಲಿ ಯಮ್ಸನ್‌ (822) ಹಾಗೂ ಆಸ್ಟ್ರೇಲಿ ಯಾದ ಮಾರ್ನಸ್‌ ಲಾಬುಶೇನ್‌(805) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ (794 ಪಾಯಿಂಟ್ಸ್) ಆರನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ (772) ಹಾಗೂ ಮೊಹಮ್ಮದ್‌ ಶಮಿ (771) ಕ್ರಮವಾಗಿ ಒಂಬತ್ತು ಮತ್ತು 10ನೇ ಕ್ರಮಾಂಕದಲ್ಲಿದ್ದಾರೆ.