Tuesday, September 29, 2026

BDA Apartments

ಮನೆಯಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಮೂವರು ಅರೆಸ್ಟ್… BDA JK_Adv BDA Adv
Home Crime ಮನೆಯಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಮೂವರು ಅರೆಸ್ಟ್…

ಮನೆಯಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಮೂವರು ಅರೆಸ್ಟ್…

ಬೆಂಗಳೂರು,ಡಿ,13,2019(www.justkannada.in):  ಮನೆಯಲ್ಲೇ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಮೂವರನ್ನ ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಅಮರ್ತ್ಯ ರಿಷಿ ಮತ್ತು ಸಹಚರರು ಸೇರಿ ಮೂವರು ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು  ಕೆಂಗೇರಿ ಅಪಾರ್ಟ್ ಮೆಂಟ್ ನಲ್ಲಿ ಗಾಂಜಾ ಬೆಳೆಯುತ್ತಿದ್ದರು. ನೆದರ್ ಲ್ಯಾಂಡ್ ನಿಂದ ಗಾಂಜಾ ಬೀಜಗಳನ್ನ ತರಿಸುತ್ತಿದ್ದರು ಎನ್ನಲಾಗಿದೆ.

ಒಂದು ಗಾಂಜಾ ಬೀಜಕ್ಕೆ ಸುಮಾರು 4 ಸಾವಿರ ರೂ ಗಳನ್ನ ನೀಡುತ್ತಿದ್ದರು.  ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನ ಬಂಧಿಸಿದ್ದು ಬಂಧಿತರಿಂದ ದುಬಾರಿ ಮೌಲ್ಯದ ನಾಲ್ಕು ಗಾಂಜಾ ಬೀಜಗಳನ್ನ ವಶಕ್ಕೆ ಪಡೆದಿದ್ದಾರೆ.

Key words: Arrest -hydro marijuana- grow-three- accused-ccb police