Sunday, October 11, 2026

Dasara Wishes

BJP DasraWishes_JK DasraWishes JK
Happy Dasara
Home Front Page ಈರುಳ್ಳಿ ಗೋಡೌನ್ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ಪರಿಶೀಲನೆ…

ಈರುಳ್ಳಿ ಗೋಡೌನ್ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ಪರಿಶೀಲನೆ…

ಬೆಂಗಳೂರು,ಡಿ,6,2019(www.justkannada.in):  ಅಕ್ರಮವಾಗಿ ಈರುಳ್ಳಿ ಶೇಖರಣೆ ಮಾಡಿದ್ದ ಹಿನ್ನೆಲೆ ಈರುಳ್ಳಿ ಗೋಡೌನ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ನಗರದ ಯಶವಂತಪುರದ RMC ಯಾರ್ಡ್ ಈರುಳ್ಳಿ ಗೋಡೌನ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದರು.  ಡಿಮ್ಯಾಂಡ್ ಹೆಚ್ಚು ಮಾಡಲು ಈರುಳ್ಳಿ ಶೇಖರಣೆ ಮಾಡಲಾಗಿತ್ತು. ಈರುಳ್ಳಿ ಬೆಲೆ ನೂರು ರೂಪಾಯಿ ಗಡಿ ದಾಟಿದ್ದು ಈ ಹಿನ್ನಲೆ ಏಜೆಂಟ್ ಗಳು ಅಕ್ರಮವಾಗಿ ಈರುಳ್ಳಿ ಶೇಖರಣೆ ಮಾಡಿದ್ದು ಈ ಬಗ್ಗೆ ಮಾಹಿತಿ ಪಡೆದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.

ಬೆಳಗ್ಗೆಯಿಂದ ಲೋಕಾಯುಕ್ತ ಅಧಿಕಾರಿಗಳು ಈರುಳ್ಳಿ ಗೋಡೌನ್ ನಲ್ಲಿನ ದಾಸ್ತಾನು ಪರೀಕ್ಷೆ  ಮಾಡಿದ್ದಾರೆ

Key words: Bangalore-onion godowns- Lokayukta officer- Inspection