Tuesday, September 29, 2026

BDA Apartments

ಕೆ.ಆರ್.ಪೇಟೆ ಉಪಚುನಾವಣೆ: ಯಾವ ಪಕ್ಷದ ಪರವೂ ಪ್ರಚಾರ ಮಾಡಲ್ಲ ಎಂದ ಸುಮಲತಾ BDA JK_Adv B...
Home Cinema ಕೆ.ಆರ್.ಪೇಟೆ ಉಪಚುನಾವಣೆ: ಯಾವ ಪಕ್ಷದ ಪರವೂ ಪ್ರಚಾರ ಮಾಡಲ್ಲ ಎಂದ ಸುಮಲತಾ

ಕೆ.ಆರ್.ಪೇಟೆ ಉಪಚುನಾವಣೆ: ಯಾವ ಪಕ್ಷದ ಪರವೂ ಪ್ರಚಾರ ಮಾಡಲ್ಲ ಎಂದ ಸುಮಲತಾ

ಮಂಡ್ಯ, ಡಿಸೆಂಬರ್ 01, 2019 (www.justkannada.in): ಕೆಆರ್ ಪೇಟೆ ಉಪ ಚುನಾವಣೆಯಲ್ಲಿ ನಾನು ಯಾವ ಪಕ್ಷದ ಪರವೂ ಪ್ರಚಾರ ಮಾಡಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ನನಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಹಾಯ ಮಾಡಿತ್ತು. ಕಾಂಗ್ರೆಸ್ ನನಗೆ ಬೆಂಬಲಿಸಿದ ಕಾರಣ ಚುನಾವಣೆಗೆ ಸ್ಪರ್ಧಿಸಿದ್ದೆ. ನನಗೆ ಎಲ್ಲ ಪಕ್ಷದವರ ಬೆಂಬಲ ಲಭಿಸಿತ್ತು. ಹೀಗಾಗಿ ನಾನು ಯಾವ ಪಕ್ಷದ ಪರವೂ ಪ್ರಚಾರ ಮಾಡದೆ ತಟಸ್ಥಳಾಗಿರುತ್ತೇನೆ ಎಂದು ತಿಳಿಸಿದ್ದಾರೆ.

ಮಂಡ್ಯ ಜನರು ತುಂಬಾ ಬುದ್ಧಿವಂತರು. ಅವರೇ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂದು ಮಂಡ್ಯ ಸಂಸದೆ ಸುಮಲತಾ ರವಿವಾರ ಸ್ಪಷ್ಟಪಡಿಸಿದ್ದಾರೆ.