Saturday, August 15, 2026

BDA Apartments

Home Front Page ಇದೇ ಕಲಾಪದಲ್ಲಿ ಪರಿವಾರ-ತಳವಾರ ಮಸೂದೆ ಪಾಸ್- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ..

ಇದೇ ಕಲಾಪದಲ್ಲಿ ಪರಿವಾರ-ತಳವಾರ ಮಸೂದೆ ಪಾಸ್- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ..

ನವದೆಹಲಿ,ನ,20,2019(www.justkannada.in): ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪರಿವಾರ ತಳವಾರದ ವಿಚಾರವಾಗಿ ಮಸೂದೆ ಮಂಡಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ರಾಜ್ಯ ಸಂಸದರ ನಿಯೋಗ ಮನವಿ ಮಾಡಿತು.

ಮೈಸೂರು ಕೊಡಗು ಸಂಸದ ಪ್ರತಾಪಸಿಂಹ, ಬೀದರ್ ಸಂಸದರಾದ ಭಗವಾನ್ ಕೂಬಾ ಅವರ ನೇತೃತ್ವದಲ್ಲಿ ದೆಹಲಿಗೆ ತೆರಳಿದ ಮೈಸೂರು ನಾಯಕರ ನಿಯೋಗ  ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ  ಅವರಿಗೆ  ಮನವಿಯನ್ನು ಸಲ್ಲಿಸಿ, ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪರಿವಾರ ತಳವಾರದ ವಿಚಾರವಾಗಿ ಮಸೂದೆ ಮಂಡಿಸಲು ಕೋರಲಾಯಿತು. ಇದೇ ಕಲಾಪದಲ್ಲಿ ಪರಿವಾರ-ತಳವಾರ ಮಸೂದೆ ಪಾಸ್ ಮಾಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದರು.

ನಿಯೋಗದಲ್ಲಿ  ಚಾ.ನಗರದ ಜಿ ಪಂ ಮಾಜಿ ಅಧ್ಯಕ್ಷರಾದ ಎಂ.ರಾಮಚಂದ್ರಣ್ಣ. ಬಿಜೆಪಿ ಮುಖಂಡರಾದ ಕುಂಬ್ರಹಳ್ಳಿ ಸುಬ್ಬಣ್ಣ, ಎಂ.ಡಿ.ಬಸವರಾಜಣ್ಣ,  ಕೆಜೆ ಶ್ರೀಧರನಾಯಕ, ಮಾಜಿ ಶಾಸಕರಾದ ಬೀಚನಹಳ್ಳಿ ಚಿಕ್ಕಣ್ಣ ಪುತ್ರ ಸಿ ಜಯಪ್ರಕಾಶ್, ಉದ್ಬೂರಿನ ಮಹದೇವಸ್ವಾಮಿ, ಚಾಮರಾಜನಗರ ಕಪನಿನಾಯಕ, ಮಾಜಿ ಕೌನ್ಸಿಲರ್ ಸುರೇಶ್ ಮತ್ತಿತರರಿದ್ದರು.

Key words: Parivar-Talavar- bill -pass-Union Minister -Prahlad Joshi – Delegation