Thursday, October 15, 2026

Dasara Wishes

Happy Dasara
Home Cinema ಕುರುಕ್ಷೇತ್ರ ಬಿಡುಗಡೆ ದಿನಾಂಕ ನಾಳೆ ನಿಗದಿ ಸಾಧ್ಯತೆ ! ಚಿತ್ರತಂಡದಿಂದ ಸುದ್ದಿಗೋಷ್ಠಿ

ಕುರುಕ್ಷೇತ್ರ ಬಿಡುಗಡೆ ದಿನಾಂಕ ನಾಳೆ ನಿಗದಿ ಸಾಧ್ಯತೆ ! ಚಿತ್ರತಂಡದಿಂದ ಸುದ್ದಿಗೋಷ್ಠಿ

ಬೆಂಗಳೂರು, ಮೇ, 18, 2019 (www.justkannada.in): ಬಹುನಿರೀಕ್ಷಿತ ಕುರುಕ್ಷೇತ್ರ ಬಿಡುಗಡೆ ದಿನಾಂಕ ನಾಳೆ ಪ್ರಕಟವಾಗುವ ಸಾಧ್ಯತೆ ಇದೆ.

ನಾಳೆ ಸಂಜೆ ೬ ಗಂಟೆಗೆ ಖಾಸಗಿ ಹೋಟೆಲ್’ನಲ್ಲಿ ಕುರುಕ್ಷೇತ್ರ ಸಿನಿಮಾದ ಸುದ್ದಿಗೋಷ್ಟಿ ಕರೆಯಲಾಗಿದೆ. ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ ಮಾಡುವುದಕ್ಕೆ ಪ್ರೆಸ್ ಮೀಟ್ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಚಿತ್ರರಂಗದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಕುರುಕ್ಷೇತ್ರ ಸಿನಿಮಾ ಸಾಕಷ್ಟು ಅದ್ಧೂರಿಯಾಗಿ ಸೆಟ್ಟೇರೋದ್ರ ಜೊತೆ ದೊಡ್ಡ ಸೆಟ್ ನಲ್ಲಿ ಶೂಟಿಂಗ್ ನಡೆದಿತ್ತು. ಖ್ಯಾತ ನಿರ್ಮಾಪಕ ಮುನಿರತ್ನ ನಿರ್ಮಿಸಿರೋ ಈ ಚಿತ್ರಕ್ಕೆ ನಾಗಣ್ಣ ಆಕ್ಷನ್ ಕಟ್ ಹೇಳಿದ್ದಾರೆ.