Thursday, October 15, 2026

Dasara Wishes

Happy Dasara
Home Cinema ದಿ ಟೈಮ್ಸ್ 50 ಮೋಸ್ಟ್ ಡಿಸೈರೇಬಲ್ ಮೆನ್ ಪಟ್ಟಿಯಲ್ಲಿ ಯಶ್ ಗೆ 14ನೇ ಸ್ಥಾನ

ದಿ ಟೈಮ್ಸ್ 50 ಮೋಸ್ಟ್ ಡಿಸೈರೇಬಲ್ ಮೆನ್ ಪಟ್ಟಿಯಲ್ಲಿ ಯಶ್ ಗೆ 14ನೇ ಸ್ಥಾನ

ಬೆಂಗಳೂರು, ಮೇ, 18, 2019 (www.justkannada.in): ನಟ, ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ!

ದಿ ಟೈಮ್ಸ್ 50 ಮೋಸ್ಟ್ ಡಿಸೈರೇಬಲ್ ಮೆನ್ ಪಟ್ಟಿಯಲ್ಲಿ 14 ನೇ ಸ್ಥಾನ ಪಡೆದಿದ್ದಾರೆ ಯಶ್. ಕ್ರೀಡೆ, ಮನರಂಜನೆ ಸೇರಿದಂತೆ ವಿವಿಧ 50 ಮಂದಿ ಸ್ಟಾರ್ ಗಳ ಪಟ್ಟಿಯಲ್ಲಿ ಯಶ್ ಗೆ 14 ನೇ ಸ್ಥಾನ ಸಿಕ್ಕಿದೆ.

ಬಾಲಿವುಡ್ ನಟ ವಿಕ್ಕಿ ಕೌಶಲ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದರೆ ವಿಜಯ್ ದೇವರಕೊಂಡ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಪ್ರಭಾಸ್, ದುಲ್ಕರ್ ಸಲ್ಮಾನ್ ಮುಂತಾದವರು ಸ್ಥಾನ ಪಡೆದಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 5 ನೇ ಸ್ಥಾನದಲ್ಲಿದ್ದಾರೆ. ಕೆಎಲ್ ರಾಹುಲ್ 25, ಹಾರ್ದಿಕ್ ಪಾಂಡ್ಯ 30ನೇ ಸ್ಥಾನದಲ್ಲಿದ್ದಾರೆ.