Wednesday, August 19, 2026

BDA Apartments

Home Cinema ಮೆಟ್ ಗಾಲಾ ಬಳಿಕ ಕಾನ್ಸ್ ಚಿತೋತ್ಸವದಲ್ಲಿ ವೈಟ್ ಬಟ್ಟೆಯಲ್ಲಿ ಗಮನ ಸೆಳೆದ ಪ್ರಿಯಾಂಕಾ

ಮೆಟ್ ಗಾಲಾ ಬಳಿಕ ಕಾನ್ಸ್ ಚಿತೋತ್ಸವದಲ್ಲಿ ವೈಟ್ ಬಟ್ಟೆಯಲ್ಲಿ ಗಮನ ಸೆಳೆದ ಪ್ರಿಯಾಂಕಾ

 

ಮುಂಬೈ:ಮೇ-17:(www.justkannada.in) ಇತ್ತೀಚಿಗೆ ಮೆಟ್ ಗಾಲಾ- 2019ರಲ್ಲಿ ವಿಚಿತ್ರ ಉಡುಪು ಧರಿಸಿ ಎಲ್ಲರ ಗಮನಸೆಳೆದಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಕಾನ್ಸ್ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿ ಹೆಜ್ಜೆಹಾಕಿದ್ದಾರೆ.

ಪ್ರತಿಷ್ಠಿತ 72ನೇ ಎಡಿಷನ್‌ ಕಾನ್ಸ್ ಚಲನಚಿತ್ರೋತ್ಸವ ಆರಂಭವಾಗಿದ್ದು, ಬಾಲಿವುಡ್ ತಾರೆಯರಾದ ಪ್ರಿಯಾಂಕಾ ಚೊಪ್ರಾ, ದೀಪಿಕಾ ಪಡುಕೋಣೆ, ಕಂಗನಾ ರಣೌತ್ ಅವರು ವಿಶಿಷ್ಠ ಉಡುಪುದರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆಹಾಕಿದ್ದಾರೆ.

ಮೆಟ್ ಗಾಲಾದಲ್ಲಿ ಭಯಂಕರ ಅಲಂಕಾರ, ವಿಚಿತ್ರ ವೇಷಭೂಷಣದಲ್ಲಿ ಗಮನ ಸೆಳೆದ ಪ್ರಿಯಾಂಕಾ, ಕಾನ್ಸ್ ನಲ್ಲಿ ಹೇಗೆ ಗಮನಸೆಳೆಯಲಿದ್ದಾರೆ ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದ್ದು, ಪ್ರಿಯಾಂಕಾ ಫುಲ್ ವೈಟ್ ಅಂಡ್ ವೈಟ್ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡಕ, ಟ್ರಾವೆಲ್ ಕೋಟ್, ವೈಟ್ ಅಂಡ್ ವೈಟ್ ಬಟ್ಟೆ, ಪ್ಯಾಂಟ್ ಧರಿಸಿ ಏರ್‌ಪೋರ್ಟ್ ಲುಕ್‌ನಲ್ಲಿ ಮಿಂಚಿದ್ದಾರೆ. ಅಲ್ಲದೇ ಕಾನ್ಸ್ ಚಿತ್ರೋತ್ಸವದಲ್ಲಿ ಪ್ರಿಯಾಂಕಾ ಚೋಪ್ರಾ ಎಚ್‍ಐವಿ/ಏಡ್ಸ್ ಕುರಿತ ಸಾಕ್ಷ್ಯಚಿತ್ರ 5B ವೀಕ್ಷಿಸಲಿದ್ದಾರೆ. ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಪ್ರಿಯಾಂಕಾ ತಮ್ಮ ಇನ್‍ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಫೋಟೋಗೆ ನಟ ಅರ್ಜುನ್ ಕಪೂರ್ ಕಾಮೆಂಟ್ ಮಾಡಿದ್ದು, ಎಲ್ಲಾ ಸರ್ಫ್ ಎಕ್ಸೆಲ್ ಮಾಯೆ ಎಂದು ಹೇಳಿದ್ದಾರೆ.

ಮೆಟ್ ಗಾಲಾ ಬಳಿಕ ಕಾನ್ಸ್ ಚಿತೋತ್ಸವದಲ್ಲಿ ವೈಟ್ ಬಟ್ಟೆಯಲ್ಲಿ ಗಮನ ಸೆಳೆದ ಪ್ರಿಯಾಂಕಾ
Cannes 2019,Priyanka Chopra,white outfit