ಬೆಂಗಳೂರು,ನವೆಂಬರ್,14,2026 (www.justkannada.in): ದೇಶದಲ್ಲಿ ನಮ್ಮ ರಾಜ್ಯ ಹೆಚ್ಚು ತೆರಿಗೆ ಕಟ್ಟುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಅನುದಾನ ನೀಡಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.
ನಿನ್ನೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜೊತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಒಟ್ಟಾಗಿ ಕೆಲಸ ಮಾಡಬೇಕು ಅಭಿವೃದ್ದಿ ವಿಚಾರವಾಗಿ ರಾಜಕೀಯ ಬೇಡ. ಚುನಾವಣೆ ಬಂದಾಗ ಬೇರೆ ಸಾರ್ವಜನಿಕರ ಸೇವೆ ಮಾಡೋದು ನಮ್ಮ ಕರ್ತವ್ಯ. ದೇಶದಲ್ಲಿ ಅತಿಹೆಚ್ಚು ತೆರಿಗೆ ಕಟ್ಟುತ್ತೀವಿ, ಹಾಗಾಗಿ ಅನುದಾನ ನೀಡಬೇಕು ಎಂದರು.
ಮೆಟ್ರೋ 500 ಕಿಲೋ ಮೀಟರ್ ವರೆಗೂ ವಿಸ್ತರಣೆಗೆ ಮನವಿ ಮಾಡಿದ್ದೇನೆ. ಮೆಟ್ರೋ ಯೋಜನೆ ಶೇಕಡಾ 50 :50 ಅನುದಾನದಲ್ಲಿ ನಡೆಯಲಿದೆ. ಬೆಂಗಳೂರಿನಿಂದ ಮೈಸೂರಿಗೆ ಮೋದಿ ಜೊತೆ ತೆರಳಿದ ವಿಚಾರ, ಏನೆಲ್ಲಾ ಚರ್ಚೆ ಆಯಿತು ಎಂದು ನಾನು ಹೇಳಲ್ಲ ಹೇಳುವುದಕ್ಕೂ ಆಗಲ್ಲ ನಮ್ಮ ಪಕ್ಷದ ನಾಯಕರೂ ನನ್ನನ್ನು ಪ್ರೀತಿ ಗೌರವದಿಂದ ಕಾಣುತ್ತಾರೆ ಎಂದರು.






