Friday, November 13, 2026

Dasara Wishes

ಹುಣಸೂರು ಚಿನ್ನಾಭರಣ ದರೋಡೆಗೆ ಬಿಗ್ ಟ್ವಿಸ್ಟ್…! DasraWishes_JK DasraWishes JK
Happy Dasara
Home Front Page ವಿಜ್ಞಾನ, ತಂತ್ರಜ್ಞಾನ, ಶಿಕ್ಷಣಕ್ಕೆ ಕರ್ನಾಟಕದ ಕೊಡುಗೆ ಅಪಾರ- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ವಿಜ್ಞಾನ, ತಂತ್ರಜ್ಞಾನ, ಶಿಕ್ಷಣಕ್ಕೆ ಕರ್ನಾಟಕದ ಕೊಡುಗೆ ಅಪಾರ- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ವಿಜ್ಞಾನ, ತಂತ್ರಜ್ಞಾನ, ಶಿಕ್ಷಣಕ್ಕೆ ಕರ್ನಾಟಕದ ಕೊಡುಗೆ ಅಪಾರ- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಮೈಸೂರು,ನವೆಂಬರ್,13,2026 (www.justkannada.in): ವಿಜ್ಞಾನ, ತಂತ್ರಜ್ಞಾನ, ಶಿಕ್ಷಣಕ್ಕೆ ಕರ್ನಾಟಕದ ಕೊಡುಗೆ ಅಪಾರವಾದುದು. ಕಾಸ್ಮೋಸ್ ತಾರಾಲಯ ಉದ್ಘಾಟನೆ ಕರ್ನಾಟಕಕ್ಕೆ ಮತ್ತೊಂದು ಗರಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನುಡಿದರು.

ಮೈಸೂರಿನಲ್ಲಿ ಕಾಸ್ಮೋಸ್ ತಾರಾಲಯ ಉದ್ಘಾಟನೆ ಬಳಿಕ ವೇದಿಕೆಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು. ಇದು ದೇಶದ ಪ್ರಧಾನಿ‌ ನರೇಂದ್ರ ಮೋದಿ ಅವರ ಕೊಡುಗೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ ಕಾಸ್ಮೋಸ್ ತಾರಾಲಯ ಆರಂಭವಾಗಿದೆ ಎಂದು ಕರ್ನಾಟಕ ಸರ್ಕಾರ, ಮೈಸೂರು ವಿವಿ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದರು.ಮೈಸೂರಿನಲ್ಲಿ COSMOS ತಾರಾಲಯ ಲೋಕರ್ಪಣೆ ಮಾಡಿದ ಪ್ರಧಾನಿ ಮೋದಿ

ಶಾಲೆ ಕಾಲೇಜು ಅರಿವು ಕೇಂದ್ರಗಳಲ್ಲಿ ಇದನ್ನು ಲೈವ್ ಮಾಡಲಾಗುತ್ತಿದೆ. ಕರ್ನಾಟಕ ಹಿಂದಿನಿಂದಲೂ ವಿಜ್ಞಾನಕ್ಕೆ ತನ್ನದೇ ಕೊಡುಗೆ ನೀಡುತ್ತಾ ಬಂದಿದೆ. ಮೈಸೂರು ಮಹಾರಾಜರು ಸಹಾ ಇದಕ್ಕೆ ಭೂಮಿ ಕೊಡುಗೆ ನೀಡಿದ್ದಾರೆ. ಇದು ಕರ್ನಾಟಕಕ್ಕೆ ಮತ್ತೊಂದು ಗರಿ. ಮೈಸೂರಿನ ವಿದ್ಯಾರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದೆ. ಮೈಸೂರಿನ ಪ್ರವಾಸೋದ್ಯಮಕ್ಕೂ ಇದು ಕೊಡುಗೆ ನೀಡಲಿದೆ. ಮೈಸೂರಿಗೆ ಇದಕ್ಕಾಗಿಯೇ ಪ್ರವಾಸಿಗರು ಬರುತ್ತಾರೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ದಿಯಾಗಲಿದೆ. ಸ್ಥಳೀಯ ವ್ಯಾಪಾರ ವೃದ್ದಿಯಾಗಲಿದೆ. ವಿದ್ಯಾರ್ಥಿಗಳು ಹಾಗೂ ಸಂದರ್ಶಕರಿಗೆ ಇದು ಬಾಹ್ಯಕಾಶದ ಸಂಪೂರ್ಣ ಮಾಹಿತಿ ನೀಡಲಿದೆ ಎಂದರು.ವಿಜ್ಞಾನ, ತಂತ್ರಜ್ಞಾನ, ಶಿಕ್ಷಣಕ್ಕೆ ಕರ್ನಾಟಕದ ಕೊಡುಗೆ ಅಪಾರ- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ವಿಜ್ಞಾನ – ತಂತ್ರಜ್ಞಾನ – ಶಿಕ್ಷಣಕ್ಕೆ ಕರ್ನಾಟಕದ ಕೊಡುಗೆ ಅಪಾರ. ಮೈಸೂರು ಮಹಾರಾಜರು ಕೂಡ ವಿಜ್ಞಾನ – ತಂತ್ರಜ್ಞಾನ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದರು. ದೇಶದ ವಿಜ್ಞಾನದ ಬೆಳವಣಿಗೆಗೆ ಕರ್ನಾಟಕದ ಕೊಡುಗೆ ಅಧಿಕ. ಖಗೋಳ ಶಿಕ್ಷಣವನ್ನು ಮಕ್ಕಳಿಗೆ ಹೆಚ್ಚು ಹತ್ತಿರ ಮಾಡಲು ಈ ತಾರಾಲಯ ಅನೂಕುಲವಾಗಿದೆ. ಪ್ರವಾಸೋದ್ಯಮ ಬೆಳವಣಿಗೆ ದೃಷ್ಟಿಯಿಂದಲ್ಲೂ ಕೂಡ ಈ ತಾರಾಲಯ ಮಹತ್ವ ಪಡೆದಿದೆ ಎಂದು ತಿಳಿಸಿದರು.COSMOS Planetarium jk02_new jk02 new

ಹಾಗೆಯೇ ಜೈ ಜವಾನ್ ಜೈ ಕಿಶಾನ್ ಲಾಲ್ ಬಹದ್ದೂರ್ ಶಾಸ್ತ್ರಿ ನೀಡಿದರು. ಅಟಲ್ ಬಿಹಾರಿ ವಾಜಪೇಯಿ ಅದಕ್ಕೆ ವಿಜ್ಞಾನ ಸೇರಿಸಿದರು. ಮೋದಿ ಜೈ ಅನುಸಂಧನಾ ಸೇರಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ನುಡಿದರು.

 

English Summary
Title

Nirmala Sitharaman’s Role in Mysuru’s COSMOS Planetarium: Boosting Science & Education

Short Description
Union Finance Minister Nirmala Sitharaman played a key role in establishing the COSMOS Planetarium in Mysuru, Karnataka, to advance science, technology, and astronomy education. Representing Karnataka in the Rajya Sabha, she conceptualized the project and allocated ₹5 crore from her MPLADS funds. Executed by the Indian Institute of Astrophysics and the University of Mysore, it features India’s first 15-metre tilted 8K LED dome. With multilingual shows in Kannada, English, and Hindi, the facility serves as a major educational hub, inspiring rural students and fostering space research across Karnataka.
Keywords
Mysore, COSMOS Planetarium, Karnataka, contribution, science, technology, education, Union Minister, Nirmala Sitharaman