Saturday, November 7, 2026

Dasara Wishes

Nanjangud DasraWishes_JK DasraWishes JK
Happy Dasara
Home Front Page ಕೇಂದ್ರ ಸಚಿವ HDK  ಭೇಟಿ : ರಾಜಕೀಯ ವಿಚಾರ ಚರ್ಚಿಸಿದ್ದೇನೆ- MLC ರಾಜೇಂದ್ರ ರಾಜಣ್ಣ

ಕೇಂದ್ರ ಸಚಿವ HDK  ಭೇಟಿ : ರಾಜಕೀಯ ವಿಚಾರ ಚರ್ಚಿಸಿದ್ದೇನೆ- MLC ರಾಜೇಂದ್ರ ರಾಜಣ್ಣ

ಕೇಂದ್ರ ಸಚಿವ HDK ಭೇಟಿ : ರಾಜಕೀಯ ವಿಚಾರ ಚರ್ಚಿಸಿದ್ದೇನೆ- MLC ರಾಜೇಂದ್ರ ರಾಜಣ್ಣ

ಹಾಸನ,ನವೆಂಬರ್,7,2026 (www.justkannada.in):  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನ ಭೇಟಿಯಾಗಿದ್ದು ನಿಜ. ಅವರ ಜೊತೆ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ಮಾಜಿ ಸಚಿವ ಕೆಎನ್ ರಾಜಣ್ಣ ಅವರ ಪುತ್ರ ಹಾಗೂ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಎಂಎಲ್ ಸಿ ರಾಜೇಂದ್ರ, ಹೆಚ್ ಡಿಕೆ ಭೇಟಿ ವಿಚಾರದಲ್ಲಿ ಯಾವುದೇ ಮುಚ್ಚು ಮರೆ ಇಲ್ಲ. ಹೆಚ್ ಡಿಕೆ ಜೊತೆ ರಾಜಕೀಯ ವಿಚಾರಗಳ ಚರ್ಚಿಸಿದ್ದೇನೆ. ನಮ್ಮ ಜಿಲ್ಲೆ ತಾಲ್ಲೂಕಿಗೆ ಕಾರ್ಖಾನೆ ತರುವ ಬಗ್ಗೆ ಚರ್ಚೆ ಮಾಡಿದ್ದೇನೆ.  ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದೇನೆ. ಎರಡು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದಿದೆ ಎಂದರು.ಕೇಂದ್ರ ಸಚಿವ HDK ಭೇಟಿ : ರಾಜಕೀಯ ವಿಚಾರ ಚರ್ಚಿಸಿದ್ದೇನೆ- MLC ರಾಜೇಂದ್ರ ರಾಜಣ್ಣ

ನಾನಾಗಲಿ ರಾಜಣ್ಣ ಅವರಾಗಲಿ ಜೆಡಿಎಸ್ ಸೇರುತ್ತೇವೆ  ಎಂದು ಹೇಳಿಲ್ಲ. ಇನ್ನೂ ನನಗೆ 18 ತಿಂಗಳ ಅಧಿಕಾರ ಇದೆ. ಪಕ್ಷ ಬದಲಿಸುವ ವಿಚಾರ ಸದ್ಯಕ್ಕಿಲ್ಲ ಕಾಂಗ್ರೆಸ್ ನಲ್ಲೇ ಇದ್ದೇನೆ  ಎಂದು ರಾಜೇಂದ್ರ ಅವರು ತಿಳಿಸಿದರು.Meet jk02_new jk02 new

 

English Summary
Title

Meeting with Union Minister HDK: Discussed political matters – MLC Rajendra Rajanna

Short Description
Rajendra Rajanna, a Congress Member of the Legislative Council (MLC) and son of former minister K.N. Rajanna, confirmed that he met with Union Minister H.D. Kumaraswamy and discussed political matters with him. Speaking about the meeting, MLC Rajendra stated that there is nothing hidden regarding his interaction with H.D. Kumaraswamy (HDK). He mentioned that they discussed political issues, the establishment of a factory in his district/taluk, and current political developments. He added that the discussion lasted for more than two hours.
Keywords
Meet, Union Minister, HDK, Discussed political matters, MLC, Rajendra Rajanna