ಬೆಂಗಳೂರು,ನವೆಂಬರ್,7,2026 (www.justkannada.in): ಕೆಪಿಎಸ್ ಸಿಯಲ್ಲಿ ಹಗರಣ ವಿರುದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪ್ರತಿಭಟನೆಗೆ ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೆಚ್ ಡಿಕೆ ಅವರ ಕಾಲ ಹಗರಣ ಹೊರಗೆ ಬರುತ್ತೆ ನೋಡಿ ಎಂದು ಟಾಂಗ್ ಕೊಟ್ಟಿದ್ದಾರೆ. 
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಯುವಕರ ಭವಿಷ್ಯ ಕೊಳ್ಳೆ ಹೊಡೆದಿದ್ದು ಹೆಚ್ ಡಿಕೆ. ಹೆಚ್ ಡಿ ಕುಮಾರಸ್ವಾಮಿ ಅವರೇ ಅಲ್ವೇ ಕೆಪಿಎಸ್ ಸಿ ಪಿತಾಮಹ. ಕೆಪಿಎಸ್ ಸಿ ಚೇರ್ಮನ್ ಮಾಡಿದವರು ಜೈಲಿಗೆ ಹೋಗಿ ಬಂದಿದ್ದಾರೆ. ಹೆಚ್ ಡಿಕೆ ಕಾಲದಲ್ಲಿ ನಡೆದಿರುವ ಹಗರಣ ಹೊರಗೆ ಬರುತ್ತೆ ನೋಡಿ ಎಂದರು.
ಸಾಹುಕಾರ್ ಶಿವಶಂಕರಪ್ಪ ಬಗ್ಗೆ ಕುಮಾರಸ್ವಾಮಿ ಯಾಕೆ ಮಾತನಾಡುತ್ತಿಲ್ಲ. ಯಾರಾದರೂ ಶಿವಶಂಕರಪ್ಪ ಬಗ್ಗೆ ಮಾತನಾಡುತ್ತಿದ್ದಾರಾ? ಇವರಿಂದ ನಾನು ಏನೂ ಕಲಿಯಬೇಕಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.
Just, wait and see, scandals, HDK, tenure, Home Minister, Priyank Kharge.






