ತುಮಕೂರು,ನವೆಂಬರ್,7,2026 (www.justkannada.in): ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನ ಹಳ್ಳಿಗುಗ್ಗಿನ ರೀತಿ ಆಡುತ್ತಾರೆ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟೀಕೆ ಕುರಿತು ಪೌರಾಡಳಿತ ಸಚಿವ ಹೆಚ್ ಸಿ ಬಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ. 
ಈ ಕುರಿತು ಮಾತನಾಡಿದ ಸಚಿವ ಹೆಚ್ ಸಿ ಬಾಲಕೃಷ್ಣ, ಹೆಚ್ ಡಿಕುಮಾರಸ್ವಾಮಿಯವರು ವಾರ್ ನಿಲ್ಲಿಸಿದರೇ ನಿಲ್ಲಬಹುದು. ಆದರೆ ಅವರು ನಿಲ್ಲಿಸೋಕೆ ತಯಾರಿಲ್ಲ ಮುಂದುವರೆಸುತ್ತಿದ್ದಾರೆ .ನಾವು ಸುಮ್ಮನೇ ಇರಲು ಆಗಲ್ಲ ಅದಕ್ಕೆ ಉತ್ತರ ಕೊಡುತ್ತಿದ್ದೇವೆ. ಹಳ್ಳು ಗುಗ್ಗು ಅಂದಿದ್ದು ತಪ್ಪು. ಕುಮಾರಸ್ವಾಮಿ ಅದಕ್ಕಿಂತಲೂ ಕಡೆ ಎಂದು ಲೇವಡಿ ಮಾಡಿದರು.
ತುಮಕೂರು-ಬೆಂಗಳೂರು ಹೈವೇನಲ್ಲಿ ಟ್ರಾಫೀಕ್ ಸಮಸ್ಯೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಬಾಲಕೃಷ್ಣ, ದುರಸ್ತಿ ಕಾರ್ಯ ವೀಕೆಂಡ್ ಸರಣಿ ರಜೆ ಹಿನ್ನೆಲೆ ವಾಹನ ದಟ್ಟಣೆಯಾಗಿದೆ. ತುಮಕೂರು ಬೆಂಗಳೂರು ಹೈವೇ 18 ಜಿಲ್ಲೆಗಳಿಗೆ ಸಂಪರ್ಕಿಸುತ್ತದೆ. ಒಂದು ಲೈನ್ ಹೆಚ್ಚು ಮಾಡುವಂತೆ ಸಿಎಂ ಅವರ ಗಮನಕ್ಕೆ ತರುತ್ತೇನೆ ಎಂದು ಬಾಲಕೃಷ್ಣ ತಿಳಿಸಿದರು.
Calling, Halliguggu, wrong, HDK, even, worse, Minister, Balakrishna






